ಕುಂದಾಪುರ(ಡಿ.22): ಶೈಕ್ಷಣಿಕವಾಗಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹಿಸುವ ಕಾರ್ಯ ಸರ್ವೇಸಾಮಾನ್ಯವಾಗಿದೆ. ಆದರೆ ಅಪರೂಪವೆಂಬಂತೆ ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿ ಪುರಸ್ಕೃತರಾದ ಡಾ.ಅಂಪಾರು ನಿತ್ಯಾನಂದ ಶೆಟ್ಟಿಯವರಿಗೆ ಅವರ ಗೋವಾದ ಸ್ನೇಹಿತರಾದ ರವಿರಾಜ್ ಕಫೆ ಹಾಗೂ ಲಕ್ಷ್ಮಿ ಎಂಪೈರ್ ತ್ರಿ ಸ್ಟಾರ್ ಹೋಟೆಲ್ ಮಾಲೀಕರಾದ ಕಾವಡಿ ಸದಾಶಿವ ಶೆಟ್ಟಿ ಹಾಗೂ ಪ್ರವೀಣ್ ಶೆಟ್ಟಿ ಹರ್ಷ ಶೆಟ್ಟಿ ತಂಡ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಿ ಗೌರವಿಸಿದ ಅಪರೂಪದ ಸನ್ನಿವೇಶ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನಲ್ಲಿ ಡಿ. 19 ರಂದು ಅರ್. ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ನಡೆಯಿತು .
ಈ ಸುಂದರ ಕ್ಷಣಕ್ಕೆ ಜಿಲ್ಲಾ ಗವರ್ನರ್ ಲ. ವಿಶ್ವನಾಥ್ ಶೆಟ್ಟಿ ಎಂ. ಜೆ.ಎಫ್, ದ್ವಿತೀಯ ಉಪ ಗವರ್ನರ್ ಡಾ.ನೇರಿ ಕರ್ನೆಲಿಯೋ, ಜಿಲ್ಲಾ ಸಂಪುಟ ಕಾರ್ಯದರ್ಶಿ ಲ.ಶ್ರೀಮತಿ ಸ್ವಪ್ನ ಸುರೇಶ್, ಕೋಶಾಧಿಕಾರಿ ಲ. ಜಯಪ್ರಕಾಶ್ ಭಂಡಾರಿ, ಲಯನ್ಸ್ ವಿಸ್ತರಣಾಧಿಕಾರಿ ಲ. ಅರುಣ್ ಹೆಗ್ಡೆ, ಪ್ರಾಂತೀಯ ಅಧ್ಯಕ್ಷರಾದ ಕೆದೂರು ಸೀತಾರಾಮ ಶೆಟ್ಟಿ, ವಲಯಾಧ್ಯಕ್ಷರಾದ ಲ.ಅಶೋಕ್ ಶೆಟ್ಟಿ ಸಂಸಾಡಿ, ಲ. ಟಿ. ನಾರಾಯಣ ಶೆಟ್ಟಿ, ಲ.ಅಶೋಕ್ ಆಚಾರ್ಯ, ಕೋಸ್ಟಲ್ ನ ಅಧ್ಯಕ್ಷರಾದ ಲ. ಜಯಶೀಲ ಶೆಟ್ಟಿ ಕಂದಾವರ ಹಾಗೂ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಸರ್ವ ಸದಸ್ಯರು ಸಾಕ್ಷೀಭೂತರಾದರು.