ಉಪ್ಪುಂದ(ಡಿ.28): ಯುವ ಸಾಹಿತಿ ಶ್ರೀ ಜಗದೀಶ್ ದೇವಾಡಿಗ ಉಪ್ಪುಂದ ರವರ ಸಾಹಿತ್ಯ ಕ್ಷೇತ್ರದ ಸೇವೆಯನ್ನು ಗುರುತಿಸಿ ರೈತರ ದಿನಾಚರಣೆಯ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ದೇಶಪಾಂಡೆ ಪ್ರತಿಷ್ಠಾನ ಮತ್ತು ಕೇಂದ್ರ ಸಾಹಿತ್ಯ ವೇದಿಕೆ ಬೆಂಗಳೂರು ಇವರು ನೀಡಿರುವ 2020ನೇ ಸಾಲಿನ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ “ಕಾವ್ಯ ಭೂಷಣ ಪ್ರಶಸ್ತಿ” ಪಡೆದಿರುವ ಶ್ರೀ ಜಗದೀಶ್ ದೇವಾಡಿಗ ಉಪ್ಪುಂದ ರವರ ಸಾಹಿತ್ಯ ಕ್ಷೇತ್ರದಲ್ಲಿನ ರಾಜ್ಯಮಟ್ಟದ ಸಾಧನೆಯನ್ನು ಗುರುತಿಸಿ ಡಿ.23 ರಂದು ಶ್ರೀ ಕೃಷ್ಣಲಲಿತ ಕಲಾಮಂದಿರ ನಾಗೂರಿನಲ್ಲಿ ನಡೆದ “ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ” ರೈತರ ದಿನಾಚರಣೆಯ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.