ಸಾಲಿಗ್ರಾಮ (ಡಿ.28): ಸ್ವರಾಜ್ಯ75 ಸಂಘಟನೆ, ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು,ಹಸ್ತ ಚಿತ್ತ ಫೌಂಡೇಶನ್, ಎಂ.ಎಸ್.ಆರ್.ಎಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಹಾಗೂ ಗ್ರಾಮಸ್ಥರ ಸಹಕಾರದಿಂದ ಸಾಲಿಗ್ರಾಮದ ಪಾರಂಪಳ್ಳಿಯಲ್ಲಿ ಆಯೋಜಿಸಿದ ಸ್ವಾತಂತ್ರ್ಯ ಹೋರಾಟಗಾರರ ಮನೆಯ ನಾಮಫಲಕವನ್ನು ಶ್ರೀ ಎ.ಎಸ್.ಎನ್.ಹೆಬ್ಬಾರ್ ರವರು ಡಿ.25ರಂದು ಅನಾವರಣಗೊಳಿಸಿದರು .
ಭಾರತದ ಸ್ವಾತಂತ್ರ್ಯಕ್ಕೆ ಕರಾವಳಿಗರ ಕೊಡುಗೆ ಈ ವಿಚಾರಕ್ಕೆ ಸಂಭಂಧಿಸಿದಂತೆ ಕುಂದಾಪುರದ ಹಿರಿಯ ಪತ್ರಕರ್ತ ಶ್ರೀ ಜಾನ್ ಡಿಸೋಜಾ ಮಾತನಾಡಿದರು. ಪಾರಂಪಳ್ಳಿ ದಿ.ಜನಾಧ೯ನ ಮಧ್ಯಸ್ಥ ರ ಸೇವಾ ವಿಚಾರವನ್ನು ಶ್ರೀ ಶ್ರೀಧರ್ ಹಂದೆ ವಿವರವಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸುಲತಾ ಹೆಗ್ಡೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ರವರು ವಹಿಸಿದ್ದರು. ಶ್ರೀ ನೀಲಾವರ ಸುರೇಂದ್ರ ಅಡಿಗ,ಶ್ರೀ ಚಂದನ್ ಗೌಡ (ಹಸ್ತ ಚಿತ್ತ ಫೌಂಡೇಷನ್),ಶ್ರೀ ಸುಧಾಕರ ಮಧ್ಯಸ್ಥ ,ಶ್ರೀಮತಿ ಅಕ್ಷತಾ ಗಿರೀಶ್ ಐತಾಳ್,ಶ್ರೀ ವಿದ್ಯಾ ಹೇರಳೆ ಹಾಗೂ ಶ್ರೀ ಗಣೇಶ್ ಉಪಸ್ಧಿತರಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಿಗೆ ಸನ್ಮಾನಿಸಲಾಯಿತು.

ಸ್ವರಾಜ್ಯ ೭೫ ಕಾರ್ಯಕ್ರಮ ಸಂಚಾಲಕ ಶ್ರೀ ಪ್ರದೀಪ ಕುಮಾರ್ ಬಸ್ರೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಾರಂಪಳ್ಳಿ ನರಸಿಂಹ ಐತಾಳ್ ಧನ್ಯವಾದಗೈದರು. ಶ್ರೀಪತಿ ಹೇರಳೆ ಕಾರ್ಯಕ್ರಮ ನಿರೂಪಿಸಿದರು.












