ಬಸ್ರೂರು(ಜ.3): ರಾಷ್ಟ್ರಪ್ರಶಸ್ತಿ ಪುರಸ್ಕೃತ ಯಾಕೂಬ್ ಖಾದರ್ ಗುಲ್ವಾಡಿ ಹಾಗೂ ರೊನಾಲ್ಡ್ ಲೋಬೊ ನಿರ್ದೇಶನದ ಕರಾವಳಿಯ ಯುವ ಪ್ರತಿಭೆಗಳನ್ನೊಳಗೊಂಡ ಆ 90 ದಿನಗಳು ಸಿನಿಮಾದ ಫಸ್ಟ್ ಲುಕ್ ಪೋಸ್ಟರ್, ಟೈಲರ್ ಮತ್ತು ಹಾಡು ಬಿಡುಗಡೆ ಕಾರ್ಯಕ್ರಮ ಜ.02 ರಂದು ಗುಲ್ವಾಡಿಯಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಹಿಂದುಳಿದ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ್ ಹೆಗ್ಡೆ,ನಾಡೋಜ ಡಾ. ಜಿ ಶಂಕರ್ ,ಖ್ಯಾತ ಚಲನಚಿತ್ರ ನಿರ್ದೇಶಕ,-ನಟ ರಿಷಬ್ ಶೆಟ್ಟಿ ,ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ,ಹಿರಿಯ ನ್ಯಾಯವಾದಿ ಎಎಸ್ಎನ್ ಹೆಬ್ಬಾರ್,ಜಾನ್ಸನ್ ಡಿ’ಅಲ್ಮೈಡಾ,ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಸುಪ್ರಸಾದ್ ಶೆಟ್ಟಿ ಬೈಕಾಡಿ ,ಮೊಗವೀರ ಯುವ ಸಂಘಟನೆ (ರಿ) ಉಡುಪಿ ಇದರ ಅಧ್ಯಕ್ಷ ಶಿವರಾಮ್ .ಕೆ ,ಸಹನಾ ಗ್ರೂಪ್ ನ ಸುರೇಂದ್ರ ಶೆಟ್ಟಿ, ವೈದ್ಯರಾದ ಡಾ.ಆದರ್ಶ ಹೆಬ್ಬಾರ್.,ಡಾ.ರಂಜನ್ ಶೆಟ್ಟಿ, ಸುಬ್ರಹ್ಮಣ್ಯ ಶೆಟ್ಟಿ, ವಕೀಲರಾದ ರವಿಕಿರಣ್ ಮುರ್ಡೇಶ್ವರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ರತಿಕ್ ಮುರ್ಡೇಶ್ವರ ನಾಯಕ ನಟನಾಗಿ ಚಂದ್ರಿಕಾ ಹಾಗೂ ಕೃತಿಕಾ ಬಾಗಲಕೋಟೆಯವರು ನಾಯಕಿಯರಾಗಿ ಈ ಚಿತ್ರದಲ್ಲಿ ನಟಿಸಿದ್ದು ,ಪ್ರಾಪ್ತಿ ಮಡಪ್ಪಾಡಿ ಸೇರಿದಂತೆ ಹಲವು ಸ್ಥಳೀಯ ನಟ ನಟಿಯರು ಸಿನೆಮಾದಲ್ಲಿ ನಟಿಸಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತರು ಹಾಗೂ ಚಿತ್ರದ ನಿರ್ದೇಶಕರಾದ ಯಾಕೂಬ್ ಖಾದರ್ ಕಾರ್ಯಕ್ರಮ ನಿರ್ವಹಿಸಿದರು. ಗಾಯಕ ಅರ್ಫಾಜ್ ಉಳ್ಳಾಲ್ ,ಗವಿಸಿದ್ದಯ್ಯ ಹಳಿಕೇರಿ ಮಠ ಹಾಗೂ ಮೆಹಬೂಬ್ ಕಿಲ್ಲೆದಾರ್ ರವರು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಿನಿಮಾ ಮತ್ತು ಜಾನಪದ ಹಾಡುಗಳನ್ನು ಹಾಡಿದರು.
ಸಿನೆಮಾ ತಂಡ :
ನಾಯಕ: ರತಿಕ್ ಮುರ್ಡೇಶ್ವರ, ನಾಯಕಿಯರು: ಚಂದ್ರಿಕಾ ಹಾಗೂ ಕೃತಿಕಾ ಬಾಗಲಕೋಟೆ,ನಿರ್ದೇಶನ : ರೊನಾಲ್ಡ್ ಲೋಬೊ ಹಾಗೂ ಯಾಕೂಬ್ ಖಾದರ್ ಗುಲ್ವಾಡಿ,ಕಥೆ – ಚಿತ್ರಕಥೆ – ನಿರ್ಮಾಪಕರು : ರೊನಾಲ್ಡ್ ಲೋಬೊ ,
ಸಹ ನಿರ್ಮಾಪಕರು : ಗಿರೀಶ ಶೆಟ್ಟಿಗಾರ್, ನವೀನ್ ವಿಲಿಯಮ್ ಬರ್ಬೋಜಾ, ಯಾಕೂಬ್ ಖಾದರ್ ಗುಲ್ವಾಡಿ, ತಾಂತ್ರಿಕ ನಿರ್ದೇಶನ ಬಿ.ಶಿವಾನಂದ, ಡಿ.ಓ.ಪಿ, ಪಿ.ವಿ.ಆರ್ ಸ್ವಾಮಿ, ಗೂಗಾರೆ ದೊಡ್ಡಿ, ಸಂಗೀತ : ರಾಧಾಕೃಷ್ಣ ಬಸ್ರೂರು ಸಂಕಲನ : ನಾಗೇಶ್, ಎನ್, ಕಲರಿಸ್ಟ್: ಜೆ.ಗುರುಪ್ರಸಾದ್, ಧ್ವನಿ ವಿನ್ಯಾಸ : ಬಾಲು, ಸಾಹಿತ್ಯ: ಪ್ರಮೋದ್ ಮರವಂತೆ ಸಹ ನಿರ್ದೇಶನ : ಪ್ರಸನ್ನ ಪಣಕನಹಳ್ಳಿ, ನಾಗರಾಜ್ ದಿಗ್ಗಿ, ಗಾಯಕರು : ಅರ್ಫಾಜ್ ಉಲ್ಲಾಳ್, ಶಶಿಕಲಾ ಸುನೀಲ್.