ಕೋಟ(ಜ.8): ಇಲ್ಲಿನ ಮಣೂರು ಸರಕಾರಿ ಸಂಯುಕ್ತ ಫ್ರೌಢಶಾಲೆಯ 6ನೆ ತರಗತಿಯ ವಿದ್ಯಾರ್ಥಿಗಳಿಗೆ ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ಸ್ಟ್ಯಾನಪೊರ್ಡ್ ಯುನಿವರ್ಸಿಟಿ ಯು ಎಸ್ ಎ, ಪೊಲ್ಡ್ ಸ್ಕೋಪ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆ, ದಯಾಲಾಬಾಗ್ ಎ್ಯಜುಕೇಶನ್ ಇನ್ಸ್ಟಿಟ್ಯೂಟ್ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಳ ಮ್ಯೆಕ್ರೊಸ್ಕೋಪ್ ಮಾದರಿಯ ಸಾಧನ ಪೊಲ್ಡೆಸ್ಕೋಪ್ ನ್ನು ಉಚಿತವಾಗಿ ವಿತರಿಸುದರ ಜೊತೆಗೆ ಅದರ ಬಳಕೆಯ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಇತ್ತೀಚೆಗೆ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಪೋಲ್ಡ್ ಸ್ಕೋಪ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಯ ಅಕ್ಷತಾರವರು ಈ ಉಪಕರಣದ ಬಳಕೆಯ ಬಗ್ಗೆ ಪ್ರಾಯೋಗಿಕವಾದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.