ನಾಡ(ಜ.12): ಶ್ರೀ ಕ್ಷೇತ್ರ ಹಾಡಿಗರಡಿ ದೈವಸ್ಥಾನ ನಾಡ ಇದರ ಪರಿವಾರ ದೈವಗಳ ವಾರ್ಷಿಕ ಹಾಲುಹಬ್ಬ, ಗೆಂಡಸೇವೆ, ಮಹಾಪೂಜೆ, ದೈವದರ್ಶನ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಇದೇ ಜ.14 ಮತ್ತು 15 ರಂದು ನಡೆಯಲಿದೆ.
ಜ.14 ರ ಶುಕ್ರವಾರ ಸಂಜೆ 6 ಗಂಟೆಗೆ ದೈವದರ್ಶನ ಹಾಗೂ ಗೆಂಡಸೇವೆ, 7 ಗಂಟೆಗೆ ಮಹಾ ಅನ್ನಸಂತರ್ಪಣೆ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿವೇತನ ವಿತರಣೆ
ಇನ್ನಿತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಹಾಗೆಯೇ ಜ.15ರ ಶನಿವಾರಬೆಳಿಗ್ಗೆ ಗಂಟೆ 10-00ಕ್ಕೆ – ಹಣ್ಣುಕಾಯಿ, ಮಂಗಳಾರತಿ, ತುಲಾಭಾರ ಸೇವೆ ಮಧ್ಯಾಹ್ನ ಗಂಟೆ 12-30ಕ್ಕೆ ಮಹಾಪೂಜೆ, ಅನ್ನಪ್ರಸಾದ ವಿತರಣೆ ರಾತ್ರಿ ಗಂಟೆ 7-30ಕ್ಕೆ – ಮಹಾಪೂಜೆ, ಮಂಗಳಾರತಿ ,ರಾತ್ರಿ ಗಂಟೆ 8-00ಕ್ಕೆ ಸರ್ವ ದೈವಗಳ ದರ್ಶನ ಸೇವೆ,ಹೂ ಸಮರ್ಪಣೆ, ಬಲಿಪೂಜೆ ,ರಾತ್ರಿ ಗಂಟೆ 8-30ಕ್ಕೆ ಅನ್ನಪ್ರಸಾದ ವಿತರಣೆ ನಡೆಯಲಿದ್ದು ಭಕ್ತರು ಕೋವಿಡ್-19 ನಿಯಮಗಳನ್ನು ಪಾಲಿಸಬೇಕೆಂದು ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.