ಮಲ್ಪೆ(ಜ,17): ಇತ್ತೀಚೆಗೆ ಮಲ್ಪೆ ಬಂದರಿನಲ್ಲಿ ಮೀನು ಹೊರುವ ಮಹಿಳೆ ರಾತ್ರಿ ಸಂದರ್ಭದಲ್ಲಿ ಕೆಲಸ ನಿರ್ವಹಿಸುತಿರುವಾಗ ಆಯತಪ್ಪಿ ನೀರಿಗೆ ಬಿದ್ದ ಅಪಾಯದ ಸಂದರ್ಭದಲ್ಲಿ ಸ್ವಲ್ಪವೂ ತಡಮಾಡದೆ ಅಮೃತೇಶ್ವರಿ ಬೋಟಿನಲ್ಲಿ ದುಡಿಯುತ್ತಿದ್ದ ಜೀವರಕ್ಷಕ ಸುರೇಶ್ ಖಾರ್ವಿ ಭಟ್ಕಳ (ಬಂದರ್ ರೋಡ್ ) ತನ್ನ ಜೀವದ ಹಂಗು ತೊರೆದು ನೀರಿಗೆ ಹಾರಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
ಇವರ ಸಮಯ ಪ್ರಜ್ಞೆಯಿಂದಾಗಿ ಮಹಿಳೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಶ್ರೀ ಸುರೇಶ್ ಖಾರ್ವಿಯವರು ನುರಿತ ಈಜುಪಟು ಆಗಿದ್ದು, ತುರ್ತು ಸಮಯದಲ್ಲಿ ಹಲವಾರು ಬಾರಿ ಜೀವ ರಕ್ಷಣೆ ಮಾಡಿದ ಉದಾಹರಣೆಗಳಿವೆ. ಇವರ ಈ ಸಾಹಸ ಕ ಕಾರ್ಯವನ್ನು ಮಲ್ಪೆ ಬಂದರಿನಲ್ಲಿ ಸಮಸ್ತ ಮೀನುಗಾರರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ. ಜೊತೆಗೆ ಮಲ್ಪೆ ಮೀನು ವ್ಯಾಪಾರಸ್ಥರ ಸಂಘ (ರಿ ) ಸುರೇಶ್ ಬಸವ ಖಾರ್ವಿ ಭಟ್ಕಳ ಇವರನ್ನು ಅಭಿನಂದಿಸಿ ಪ್ರಮಾಣ ಪತ್ರ ನೀಡಿ ಸನ್ಮಾನಿಸಿರುತ್ತಾರೆ.
ಈಶ್ವರ ಸಿ ನಾವುಂದ.