ಕುಂದಾಪುರ (ಜ.17 ): ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬೈಇದರ ನೂತನ ಅಧ್ಯಕ್ಷರಾಗಿ ಉದ್ಯಮಿ ರಾಜು ಮೆಂಡನ್ ಆಯ್ಕೆಯಾಗಿದ್ದಾರೆ.ಇತ್ತೀಚೆಗೆ ನಡೆದ ಸಂಘದ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿಶ್ರೀ ರಾಜು ಮೆಂಡನ್ ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಉದ್ಯಮಿ ರಮೇಶ್ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಂಜುನಾಥ್ ಎನ್ ನಾಯ್ಕ್, ಮೊಗವೀರ ಮುಖಂಡರುಗಳಾದ ಸುರೇಶ್ ಆರ್ ಕಾಂಚನ್, ಮಹಾಬಲ ಕುಂದರ್, ಎನ್ ಎಚ್ ಬಗ್ವಾಡಿ, ಸಂತೋಷ್ ಪುತ್ರನ್, ಸುಚಿತ್ರ ಪುತ್ರನ್, ಗೋಪಾಲ್ ಚಂದನ್, ರಘುರಾಮ್ ಚಂದನ್, ಸತೀಶ್ ಶ್ರೀಯಾನ್, ಸುರೇಂದ್ರ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು. ವರದಿ : ಈಶ್ವರ್ ಸಿ ನಾವುoದ














