ಕುಂದಾಪುರ(ಎ,06): : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ, ವಿದ್ಯಾರ್ಥಿಗಳು ಬೇಸಿಗೆಯ ರಜಾ ದಿನಗಳನ್ನು ಅರ್ಥಪೂರ್ಣವಾಗಿ ಕಳೆಯುವ ಮತ್ತು ಹಳ್ಳಿ ಜನರ ಬದುಕಿನ ಸೊಗಡನ್ನು ಪರಿಚಯಿಸುವ ಉದ್ದೇಶದೊಂದಿಗೆ ಪ್ರಪ್ರಥಮ ಬಾರಿಗೆ ಪಾರಂಪರಿಕ ವಾತಾವರಣದಲ್ಲಿ ಕಲಿಕಾನುಭವ ಒದಗಿಸುವ ಅಪರೂಪದ ಒಂದು ವಿಭಿನ್ನ ಮತ್ತು ವಿನೂತನವಾದ 10 ದಿನಗಳ ಬೇಸಿಗೆ ಶಿಬಿರ ” ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ “ ಎಂಬ ಪರಿಕಲ್ಪನೆಯೊಂದಿಗೆ ಆಯೋಜಿಸಲಿದೆ.
ಏಪ್ರಿಲ್ 13 ರಿಂದ 22 ರ ವರೆಗೆ ಏರ್ಪಡುವ ಈ ಸಮ್ಮರ್ ಕ್ಯಾಂಪ್ ನಲ್ಲಿ ಅನೇಕ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳು ಆಗಮಿಸಲಿದ್ದು, 6 ರಿಂದ 16 ವಯೋಮಿತಿಯ ಸಂಸ್ಥೆಯ ಆಸಕ್ತ ಮತ್ತು ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳನ್ನೂ ಕೂಡ ಸಂಸ್ಥೆ ಆಹ್ವಾನಿಸುತ್ತಿದೆ. ಆಸಕ್ತರು ಈ ನಂಬರ್ ಗೆ [ 9480402747 / 9008419648 / 9008806765 / 8548806765 ] ಸಂಪರ್ಕಿಸಿ, ಹೆಸರನ್ನು ನೋಂದಾಯಿಸಿಕೊಳ್ಳಬಹುದು.