ಕೋಟೇಶ್ವರ (ಜ.20): ಶ್ರೀ ವನದುರ್ಗಾದೇವಿ ದೇವಸ್ಥಾನ ಕಾಳಾವರ ಕ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಶ್ರೀ ಉದಯ ಕುಮಾರ ಶೆಟ್ಟಿ ಕಾಳಾವರ ಇವರನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾಧಾಯ ದತ್ತಿಗಳ ಇಲಾಖೆ ಆಯ್ಕೆ ಮಾಡಿ ಆದೇಶಿಸಿದೆ.
ಪ್ರಧಾನ ಅರ್ಚಕರಾಗಿ ಶ್ರೀ ಸತೀಶ ಜೋಗಿ, ಸಮಿತಿ ಸದಸ್ಯರಾಗಿ ಶ್ರೀ ಎ. ರೋಶನ್ ಶೆಟ್ಟಿ ಸಲ್ವಾಡಿ, ಶ್ರೀ ಕಾಳಿಂಗ ಶೆಟ್ಟಿ ಬೀಡಿನಮನೆ, ಶ್ರೀ ಚಂದ್ರಶೇಖರ ನಾಯ್ಕ ಕಾಳಾವರ, ಶ್ರೀ ವಸಂತ ಶೆಟ್ಟಿ ನಡುಬೆಟ್ಟು, ಶ್ರೀಮತಿ ಸಾವಿತ್ರಿ ಶೆಟ್ಟಿ ಬೀರ್ತಮಕ್ಕಿಮನೆ, ಶ್ರೀಮತಿ ಸುಶೀಲ ಜೋಗಿ ಕಕ್ಕೇರಿ ಹಾಗೂ ಶ್ರೀ ರವಿ ಸಲ್ವಾಡಿ ಆಯ್ಕೆಯಾಗಿರುತ್ತಾರೆ.