ಕುಂದಾಪುರ (ಸೆ, 6) : ಗುರು ಪರಂಪರೆಯಲ್ಲಿ ಗುರುವು ಒಳ್ಳೆಯ ಶಿಷ್ಯನನ್ನು ಪಡೆದಾಗ ಮಾತ್ರ ಶಿಕ್ಷಕ ಧನ್ಯನಾಗುತ್ತಾನೆ. ಸಮಾಜದಲ್ಲಿ ಗುರುವಿಗೆ ಮನ್ನಣೆಯಿದ್ದು, ಶಿಕ್ಷಕರು ತಾಯಿಗಿಂತ ಶ್ರೇಷ್ಠರು. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಸಮಾಜ ಕಟ್ಟುವ ದೇಗುಲವಿದ್ದಂತೆ ಎಂದು ಮಂಗಳೂರಿನ ರಾಮಕೃಷ್ಣ ಎಜುಕೇಶನಲ್ ಸೊಸೈಟಿಯ ಆಡಳಿತಾಧಿಕಾರಿ ಪ್ರೋ. ಎಂ. ಬಾಲಕೃಷ್ಣ ಶೆಟ್ಟಿ ಹೇಳಿದರು. ಅವರು ಸೆ. ೫ ರಂದು ಸುಣ್ಣಾರಿಯ ಎಕ್ಸಲೆಂಟ್ ಪಿಯು ಕಾಲೇಜ್ ಮತ್ತು ಸ್ಕೂಲ್ನ ಸಭಾಂಗಣದಲ್ಲಿ ನಡೆದ ಶಿಕ್ಷಕರ […]
Day: September 6, 2022
ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ ದಿನಾಚರಣೆ
ಕುಂದಾಪುರ (ಸೆ, 6) : ಮೊಬೈಲ್, ಟಿ.ವಿ. ಯಂತಹ ಯಾವುದೇ ತಾಂತ್ರಿಕ ಉಪಕರಣಗಳಿಲ್ಲದ ಪ್ರಾಚೀನ ಕಾಲದಿಂದಲೂ ಗುರುವೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಶಕ್ತಿಯಾಗಿದ್ದರು. ಇಂದಿಗೂ ವಿದ್ಯಾರ್ಥಿ- ಶಿಕ್ಷಕ ಸಂಬಂಧ ನಾಜೂಕತೆಯಿಂದ ಕೂಡಿದ್ದಾಗಿದೆ. ಪ್ರತಿಯೊಂದು ವಿಷಯವನ್ನು ಕೂಲಂಕುಷವಾಗಿ ಗಮನಿಸುವ ವಿದ್ಯಾರ್ಥಿಗಳಿಗೆ ಶಿಕ್ಷಕರೂ ಎಲ್ಲ ಆಯಾಮಗಳಿಂದಲೂ ಆದರ್ಶರಾಗಿರಬೇಕು’ ಎಂದು ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ ದಿನಾಚರಣೆಯ ಪ್ರಯಕ್ತ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಸಂಖ್ಯಾಶಾಸ್ತ್ರ ಪಾಧ್ಯಾಪಕರಾದ ಪ್ರೊ. ಬಾಲಕೃಷ್ಣ ಭಟ್ ರವರು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರುಶಿಕ್ಷಕರು ತರಗತಿಯ ಒಳಗೂ- ಹೊರಗೂ ವಿದ್ಯಾರ್ಥಿಗಳ ಜೀವನವನ್ನು ಉತ್ತಮವಾಗಿ ರೂಪಿಸುವ ವಿಧಾನಗಳನ್ನು ತಿಳಿದುಕೊಳ್ಳುತ್ತಿರಬೇಕು ಎಂದು ಅಭಿಪ್ರಾಯ ಪಟ್ಟರು. ಮುಖ್ಯ ಅತಿಥಿಯವರಾದ ಶ್ರೀ ಬಾಲಕೃಷ್ಣ ಭಟ್ ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರಿಮತಿ ಅರುಣಾ ಐತಾಳ್ ಧನ್ಯವಾದ ಸಲ್ಲಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ನಾಗರತ್ನಾ ರವರು ಕಾರ್ಯಕ್ರಮ ನಿರೂಪಿಸಿದರು.
ಗುರುಪರಂಪರೆಯನ್ನು ಗೌರವಿಸಿ – ಸಚಿವ ವಿ. ಸುನಿಲ್ ಕುಮಾರ್
ಕಾರ್ಕಳ (ಸೆ. 6) : ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಕರನ್ನು ಹಾಗೂ ಗುರುಪರಂಪರೆಯನ್ನು ಗೌರವಿಸಿ ಸಂಸ್ಕಾರಯುತ ಶಿಕ್ಷಣ ಪಡೆದು, ದೇಶದ ಅಭಿವೃದ್ಧಿಯಲ್ಲಿ ಯುವಜನರು ಕೈಜೋಡಿಸುವಂತಾಗಬೇಕೆಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದವಿ. ಸುನಿಲ್ ಕುಮಾರ್ ಹೇಳಿದರು. ಅವರು ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಡೆದ “ಗುರುದೇವೋ ಭವ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಕ್ರಿಯೇಟಿವ್ “ನಿನಾದ” ತ್ರೈಮಾಸಿಕ ಪತ್ರಿಕೆ ಬಿಡುಗಡೆಗೊಳಿಸಿ ಮಾತಾನಾಡಿದರು. ಪರೀಕ್ಷೆ ಮಾತ್ರ ಜೀವನದಲ್ಲಿ […]
ಹೆಮ್ಮಾಡಿ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು: ಶಿಕ್ಷಕರ ದಿನಾಚರಣೆ ಸಮಾರಂಭ ಗುರು-ನಮನ
ಹೆಮ್ಮಾಡಿ (ಸೆ, 06): ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆ ಯ ಆಂಗವಾಗಿ ಶಿಕ್ಷಕರ ದಿನಾಚರಣೆ ಸಮಾರಂಭ ಸೆ.05 ರಂದು ಕಾಲೇಜಿನಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾಗಿರುವ ಶ್ರೀ ಗಣೇಶ ಮೊಗವೀರರವರು ವಹಿಸಿದ್ದರು.ಮುಖ್ಯ ಅತಿಥಿಯಾಗಿ ಆಗಮಿಸಿರುವ ಸರ್ಕಾರಿ ಪ್ರೌಢಶಾಲೆ ಸಿದ್ಧಾಪುರದ ಸಹ ಶಿಕ್ಷಕಿಯಾಗಿರುವ ಶ್ರೀಮತಿ ವಸಂತಿ ಭಟ್ ಶಿಕ್ಷಕ-ಶಿಕ್ಷಣ-ವಿದ್ಯಾರ್ಥಿ ಈ ಕುರಿತು ಮಾತನಾಡಿದರು. ಪ್ರಾಂಶುಪಾಲರಾಗಿರುವ ಶ್ರೀ ಗಣೇಶ ಮೊಗವೀರರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ […]