ಕಿರುಚಿತ್ರ ಲೋಕದಲ್ಲಿ ದಿನೇ ದಿನೇ ಹೊಸ ಪ್ರತಿಭೆಗಳು ಪರಿಚಯವಾಗುತ್ತಿದೆ. ಆ ಸಾಲಿನಲ್ಲಿ ಈಗ ಕುಂದಾಪುರದ ‘ಇಷ್ಟಾರ್ಥ ಪ್ರೊಡಕ್ಷನ್’ ಎನ್ನುವ ಹೊಸ ತಂಡ ಮೊದಲ ಹೆಜ್ಜೆ ಇಟ್ಟಿದೆ.ನಟನೆಯಿಂದ ನಿರ್ದೇಶನದ ತನಕ ಮೊದಲ ಬಾರಿಗೆ ಹೊಸ ಪ್ರತಿಭೆಗಳು ಸೇರಿಕೊಂಡು ಮಾಡಿರುವ “ಕಲ್ಮಶ” ಎನ್ನುವ ಕಿರುಚಿತ್ರ ಈಗ ಪ್ರೇಕ್ಷಕರ ಮನಗೆದ್ದು ಎಲ್ಲೆಡೆ ಸದ್ದು ಮಾಡುತ್ತಿದೆ.ಗೆಳೆತನದ ನಡುವೆ ಸ್ವಾರ್ಥ ಎಂಬುದು ಬಂದಾಗ ಏನಾಗಬಹುದು ಎಂಬುದನ್ನ ಎಳೆಯಾಗಿ ಇಟ್ಟುಕೊಂಡು ಮಾಡಿರುವ ಚಿತ್ರ, ಪ್ರೇಕ್ಷಕರ ಕುತೂಹಲಕ್ಕೆ ಕೊನೆತನಕ ತಿರುವುಗಳು ನೀಡುತ್ತ, ವಿಭಿನ್ನ ಪ್ರಯತ್ನ ಮಾಡಿದ್ದಾರೆ.
ಕಥೆ,ಚಿತ್ರಕಥೆ, ಸಂಭಾಷಣೆ, ಮತ್ತು ನಿರ್ದೇಶನವನ್ನು ಯುವ ಪ್ರತಿಭೆ ಪ್ರಸಾದ್ ನೆಲ್ಲಿಕಟ್ಟೆ ಉತ್ತಮವಾಗಿ ನಿರ್ವಹಿಸಿದ್ದಾರೆ. ಸಹ ನಿರ್ದೇಶನ ಮಾಡಿರುವ ಪ್ರದೀಪ್ ಮೊಗವೀರ ಗುಡಿಬೆಟ್ಟು, ಪ್ರೇಕ್ಷಕರಿಗೆ ಕಥೆಯ ಸಾರಾಂಶವನ್ನು ಸೂಕ್ಷ್ಮವಾಗಿ ತಿಳಿಯುವಂತೆ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ. ಹೊಸ ಪ್ರತಿಭೆಗಳ ನಟನೆಯನ್ನು ಬಹಳಷ್ಟು ಅಚ್ಚುಕಟ್ಟಾಗಿ ಸೆರೆ ಹಿಡಿಯುವ ಪ್ರಯತ್ನದಲ್ಲಿ ಮೊದಲ ಬಾರಿಗೆ ಛಾಯಾಗ್ರಹಣಕ್ಕೆ ಕಾಲಿಟ್ಟ ಯುವ ಪ್ರತಿಭೆ ಶಾಶ್ವತ್ ಎಸ್ ಶೆಟ್ಟಿ ಯವರ ಛಾಯಾಗ್ರಹಣ ಉತ್ತಮವಾಗಿ ಮೂಡಿಬಂದಿದೆ. ಇಂಟ್ರೋ ಎಡಿಟಿಂಗ್ ಹಾಗೂ ಹಿನ್ನೆಲೆ ಸಂಗೀತವನ್ನು ಕೆ ಕ್ರಿಯೆಶನ್ಸ್ ಉತ್ತಮವಾಗಿ ನೀಡಿದ್ದಾರೆ. ಮತ್ತು ಅಜಿತ್ ಮೇಲ್ ಬೈಲ್ ರವರ ಸಹಕಾರ ಈ ಚಿತ್ರಕ್ಕೆ ಇದೆ.
ಮುಖ್ಯ ಭೂಮಿಕೆಯಲ್ಲಿ ಗಣೇಶ್ ಕಿಣಿ ಗಂಗೊಳ್ಳಿ, ಲಾವಣ್ಯ, ಪಂಚಮಿ, ಮೋಹನ್ ಅಂಪಾರು, ಸುಕುಮಾರ್ ಮೇಲ್ ಬೈಲ್, ಗಣೇಶ್ ಮೇಲ್ ಬೈಲ್, ಭುವನ್ ಶೇಟ್, ಪ್ರಭಾಕರ್ ನೆಲ್ಲಿಕಟ್ಟೆ, ವಿಶ್ವನಾಥ್, ನಾಗರಾಜ್, ದಿನೇಶ್ ಮುಳ್ಳುಗುಡ್ಡೆ, ಪ್ರೀತೇಶ್, ಮಯೂರ್, ಸುಶಾಂತ್ ಹಾಗೂ ಇನ್ನಿತರರು ಕಾಣಿಸಿಕೊಂಡಿದ್ದಾರೆ.
https://youtu.be/I9K9iCM1l3Qಎಲ್ಲರೂ ಈ ಕಿರುಚಿತ್ರವನ್ನು ನೋಡಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ .
ಲೇಖನ : ಶಾಶ್ವತ್ ಎಸ್ ಶೆಟ್ಟಿ