ಸೈಬ್ರಕಟ್ಟೆ(ಫೆ.6): ಜಿಲ್ಲಾ ಪಂಚಾಯತ್ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸೈಬ್ರಕಟ್ಟೆ ಹಾಗೂ ರೋಟರಿ ಕ್ಲಬ್ ಸೈಬ್ರಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಕಾಜ್ರಹಳ್ಳಿ ಶ್ರೀ ವಿಘ್ನೇಶ್ವರ ಗೇರುಬೀಜ ಕಾರ್ಖಾನೆಯ ವಠಾರದಲ್ಲಿ ಕಲಾವಿದರಾದ ಡಾ.ಗಣೇಶ್ ಗಂಗೊಳ್ಳಿ ಮತ್ತು ಬಳಗದವರಿಂದ ಜಾನಪದ ಕಲಾ ಪ್ರದರ್ಶನ ,ಬೀದಿನಾಟಕದ ಮೂಲಕ ತಾಯಿ ಮಕ್ಕಳ ಆರೋಗ್ಯ ಹಾಗೂ ಕರೋನ / ಸಾಂಕ್ರಾಮಿಕ ರೋಗಗಳ ಕುರಿತು ಜನ ಜಾಗೃತಿ ಮೂಡಿಸುವ ಕಾರ್ಯಕ್ರಮ ಫೆ5 ರಂದು ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸೈಬ್ರಕಟ್ಟೆ ಅಧ್ಯಕ್ಷ ಯು. ಪ್ರಸಾದ್ ಭಟ್ ವಹಿಸಿದ್ದರು.ರೋಟರಿ ಜಿಲ್ಲೆ 3182 ಕ್ಯಾನ್ಸರ್ ಚಿಕಿತ್ಸೆ ಮತ್ತು ಜಾಗ್ರತೆ ಇದರ ಉಪ ಸಭಾಪತಿ ರವೀಂದ್ರನಾಥ್ ಕಿಣಿ, ಕಾರ್ಯದರ್ಶಿ ಅಣ್ಣಯ್ಯ ದಾಸ್, ಸದಸ್ಯರಾದ ಕಿರಣ್ ಕುಮಾರ್, ಹೆರಿಯ ಪೂಜಾರಿ ಹಾಗೂ ಸೈಬ್ರಕಟ್ಟೆ ಪ್ರಾಥಮಿಕ
ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕರಾದ ಶ್ರೀಮತಿ ಲಾವಣ್ಯ ಹಾಗೂ ಕಾರ್ಮಿಕ ವರ್ಗದವರು ಉಪಸ್ಥಿತರಿದ್ದರು.