ವಂಡ್ಸೆ(ಫೆ.6): ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಸೇತುವೆ ನಂತರದ ಸುಮಾರು 600 ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದ್ದು , ರಸ್ತೆ ದುರಸ್ತಿ ಮಾಡಲು ಶಾಸಕ ಶ್ರ್ರೀ ಸುಕುಮಾರ್ ಶೆಟ್ಟಿ ಯವರಿಗೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಶಾಸಕರ ಗ್ರಹ ಕಛೇರಿಯಲ್ಲಿ ಮನವಿ ನೀಡಲಾಯಿತು. ದೇವಸ್ಥಾನದ ಜಾತ್ರೆಯೊಳಗೆ ರಸ್ತೆ ನಿರ್ಮಿಸಿ ಕೊಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಮೊಗವೀರ ಮಹಾಜನ ಸಂಘ(ರಿ). ಬಗ್ವಾಡಿ ಹೋಬಳಿಯ ಕುಂದಾಪುರ ಶಾಖೆಯ ನಿಯೋಜಿತ ಅಧ್ಯಕ್ಷ ಉದಯ ಹಟ್ಟಿಯಂಗಡಿ, ಸದಾನಂದ ಬಳ್ಕೂರು,ಜಗದೀಶ ಮೇಸ್ತ್ರಿ, ಸುಧಾಕರ್ ಕಾಂಚನ್, ರಮೇಶ್ ಟಿ.ಟಿ., ರವಿರಾಜ ಚಂದನ್ ಕಳವಾಡಿ ಉಪಸ್ಥಿತರಿದ್ದರು.