ಮಧುವನ(ಫೆ.9): ಇಲ್ಲಿನ ಇ ಸಿ ಆರ್ ಕಾಲೇಜಿನಲ್ಲಿ ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಫೆ.4 ರಂದು “ಫ್ಲಾಶ್ ಮೊಬ್ – ಕ್ಯಾನ್ಸರ್ ಅರಿವು ಕಾರ್ಯಕ್ರಮ”
ಆಯೋಜಿಸಲಾಗಿತ್ತು.
ಕಾಲೇಜಿನಪ್ರಾಂಶುಪಾಲ ಶ್ರೀ ಆಕಾಶ್ ಸಾವಳ ಸಂಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ನೃತ್ಯ ರೂಪಕದ ಮೂಲಕ ಧೂಮಪಾನ, ಮಧ್ಯಪಾನ ಸೇವನೆಯಿಂದಾಗಿ ಕ್ಯಾನ್ಸರ್ಗೆ ಕಾರಣವಾಗುತ್ತದೆ ಹಾಗೆಯೇ ಇದರ ಸೇವನೆ ತ್ಯಜಿಸಿ ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಂಡು ಬದುಕು ನಡೆಸುವ ಬಗೆಗೆ ಅರಿವು ಮೂಡಿಸಿದರು.
ಕಾಲೇಜಿನ ಕಲಾ ಮತ್ತು ಸಾಂಸ್ಕೃತಿಕ ಘಟಕ ಹಾಗೂ ಯುತ್ ರೆಡ್ಕ್ರಾಸ್ ಘಟಕದಸಂಯೋಜನಾಧಿಕಾರಿ ಕು.ಭಾಗ್ಯಶ್ರೀ, ಕು. ನಿಧಿ, ಶ್ರೀಮತಿ ಕುಸುಮಾವತಿ ಮತ್ತು ಶ್ರೀಮತಿ ಸುರೇಖಾ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.