ಕುಂದಾಪುರ (ಏ.10): ಜಿಲ್ಲಾ ಕ್ಷಯ ರೋಗ ನಿರ್ಮೂಲನ ಕಛೇರಿ- ಕ್ಷಯ ಘಟಕ ಕುಂದಾಪುರ, ತಾಲ್ಲೂಕು ಆರೋಗ್ಯ ಕೇಂದ್ರ ಕುಂದಾಪುರ ಇವರ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಕ್ಷಯ ರೋಗದ ಕುರಿತಾದ ಆಯ್ದ ಪದವಿ ಕಾಲೇಜುಗಳ ಅಂತರ್ ಕಾಲೇಜು ರಸಪ್ರಶ್ನೆ ಸ್ಪರ್ಧೆಯಲ್ಲಿ ಡಾ.ಬಿ.ಬಿ.ಹೆಗ್ಡೆ ಕಾಲೇಜು ಪ್ರಥಮ ಸ್ಥಾನ ಗಳಿಸಿದೆ.
ವಿಜೇತರಿಗೆ ಕುಂದಾಪುರ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ರಾಜೇಶ್ವರಿಯವರು ಪ್ರಶಸ್ತಿ ನೀಡಿ ಗೌರವಿಸಿದರು. ತಂಡದಲ್ಲಿ ಭಾಗಿಯಾದ ಅಕ್ಷಯ್ ಶೆಟ್ಟಿ, ಅಕ್ಷತ್ , ಶ್ವೇತಾ,ಮೇಘನಾ ಹಾಗೂ ಅಪೇಕ್ಷಾ ರವರಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ,ಉಪಪ್ರಾಂಶುಪಾಲರು ಹಾಗೂ ಬೋಧಕ & ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.