ಕುಂದಾಪುರ(ಏ.13): ಯಶಸ್ವಿ ಉದ್ಯಮಿ,ಸಮಾಜ ಸೇವಕ ಹಾಗೂ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.) ಉಪ್ಪುಂದ ಇದರ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಯವರು ಡಾ.ಕಾರಂತ ಪ್ರತಿಷ್ಠಾನ ಕೋಟ, ಡಾ. ಕಾರಂತ ಟ್ರಸ್ಟ್ ಉಡುಪಿ,ಕೋಟತಟ್ಟು ಗ್ರಾಮ ಪಂಚಾಯತ್ ನೀಡುವ ಕರಾವಳಿಯ ಮೀನುಗಾರ ಮುಖಂಡರಾಗಿದ್ದ ದಿ.ಕೆ.ಸಿ ಕುಂದರ್ ಸ್ಮಾರಕ ದತ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಯಾವುದೇ ಜಾತಿ, ಮತ,ಧರ್ಮ ತಾರತಮ್ಯ ಇಲ್ಲದೆ ನೋಂದವರಿಗೆ ಸಹಾಯ ಹಸ್ತ ಚಾಚುವ ಡಾ.ಗೋವಿಂದ ಬಾಬು ಪೂಜಾರಿ ಯವರಿಗೆ ಇದೇ ಏ .24 ರಂದು ಕೋಟದ ಕಾರಂತ್ ಥೀಮ್ ಪಾರ್ಕ್ನಲ್ಲಿ ಜರುಗಲಿರುವ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಘಟಕರು ತಿಳಿಸಿರುತ್ತಾರೆ.