ಕೋಟೇಶ್ವರ (ಏ,23): ವನದುರ್ಗಾ ಯುವಕ ಮಂಡಲ (ರಿ.) ಕಾಳಾವರ ಇವರ ಆಶ್ರಯದಲ್ಲಿ ನಡೆದ 30 ಗಜಗಳ ಕ್ರಿಕೆಟ್ ಪಂದ್ಯಾಟದಲ್ಲಿ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ವನದುರ್ಗಾ ಟ್ರೋಫಿ- 2022 ಯನ್ನು ಪಡೆದು ಜಯಭೇರಿ ಭಾರಿಸಿದೆ.
ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆಯನ್ನು ವನದುರ್ಗಾದೇವಿ ದೇವಸ್ಥಾನ ಕಾಳಾವರ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯಕುಮಾರ ಶೆಟ್ಟಿ ಕಾಳಾವರ ವಹಿಸಿದ್ದರು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಆರಾಧ್ಯ ಎಸ್.ಶೆಟ್ಟಿ ಕಾಳಾವರ ಇವರ ಅನುಪಸ್ಥಿತಿಯಲ್ಲಿ ಅವರ ತಂದೆ ಶ್ರೀಕಾಂತ ಶೆಟ್ಟಿ ಕಾಳಾವರ ಅವರನ್ನು ಮಹಾಲಿಂಗೇಶ್ವರ ಮತ್ತು ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಚಂದ್ರಶೇಖರ ಹೆಗ್ಡೆ ಸನ್ಮಾನಿಸಿದರು.
ಕಾಳಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರಂಜಿತ ಕುಮಾರ್ ಶೆಟ್ಟಿ ಕಾಳಾವರ,ಕೋಟೇಶ್ವರ ವ್ಯವಸಾಯ ಸೇವಾ ಸಂಘದ ನಿರ್ದೇಶಕರಾದ ಭರತ್ ಕುಮಾರ್ ಶೆಟ್ಟಿ ಮತ್ತು ಸುಣ್ಣಾರಿ ಕಿಶೋರ ಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು. ಪ್ರಥಮ ಬಹುಮಾನ ಕಟ್ಟೆ ಫ್ರೆಂಡ್ಸ್ ಕಾಳಾವರ, ದ್ವಿತೀಯ ಬಹುಮಾನ ವನದುರ್ಗಾ ಕ್ರಿಕೇಟರ್ಸ ಕೊರ್ಗಿ ಪಡೆದುಕೊಂಡರೆ ತೃತೀಯ ಬಹುಮಾನವನ್ನು ಶ್ರೀದೇವಿ ಕ್ರಿಕೇಟರ್ಸ ಸಲ್ವಾಡಿ ಪಡೆದುಕೊಂಡಿತು.
ಈ ಪಂದ್ಯಕೂಟದ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಕಟ್ಟೆ ಫ್ರೆಂಡ್ಸ್ನ ರಕ್ಷಿತ ಶೆಟ್ಟಿ, ಕೊನೆಯ ಪಂದ್ಯದ ಪಂದ್ಯ ಪುರುಷ ಪ್ರಶಸ್ತಿ ಕೇಶವ ಜೋಗಿ ಕೊರ್ಗಿ, ಪಂದ್ಯಕೂಟದ ಉತ್ತಮ ಹೊಡೆತಗಾರನಾಗಿ ಲೋಕೇಶ ಶೆಟ್ಟಿ, ಉತ್ತಮ ಎಸೆತಗಾರನಾಗಿ ರಂಜಿತ್ ಶೆಟ್ಟಿ ಪ್ರಶಸ್ತಿ ಪಡೆದುಕೊಂಡಿರುತ್ತಾರೆ. ಒಟ್ಟು 25 ತಂಡಗಳು ಭಾಗವಹಿಸಿದ್ದು ಎಲ್ಲಾ ಪಂದ್ಯಕ್ಕೂ ಪಂದ್ಯ ಪುರುಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯುವಕ ಮಂಡಲದ ಗೌರವಾಧ್ಯಕ್ಷ ಅಶ್ವಥ ಶೆಟ್ಟಿ ಸ್ವಾಗತಿಸಿದರು, ಯುವಕ ಮಂಡಲದ ಅಧ್ಯಕ್ಷ ಸುರೇಂದ್ರ ಶೆಟ್ಟಿಗಾರ ವಂದಿಸಿದರು. ವೆಂಕಟ ಗುಡ್ಡೆಯಂಗಡಿ ಕಾರ್ಯಕ್ರಮ ನಿರೂಪಿಸಿದರು.