ಕೊಲ್ಲೂರು(ಮೇ,15): ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿ ಕೇಂದ್ರ ಶ್ರೀ ಕ್ಷೇತ್ರ ಕೊಲ್ಲೂರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಮೇ14 ರ ಬೆಳಿಗ್ಗೆ ಭೇಟಿ ನೀಡಿ ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದರು.
ದೇಗುಲದ ಹಿರಿಯ ಅರ್ಚಕ ಡಾ. ಕೆ.ಎನ್ .ನರಸಿಂಹ ಅಡಿಗ ಹಾಗೂ ಶ್ರೀ ಎನ್.ಪರಮೇಶ್ವರ ಅಡಿಗರವರ ನೇತ್ರತ್ವದಲ್ಲಿ ಸಚಿವರಿಗೆ ಗೌರವಪೂರ್ವಕವಾಗಿ ದೇವಳಕ್ಕೆ ಸ್ವಾಗತಿಸಲಾಯಿತು.ಈ ಸಂಧರ್ಭದಲ್ಲಿ ಹಿಂದಿನ ದಿನಗಳಲ್ಲಿ ತಾವು ದೇವಾಲಯಕ್ಕೆ ಆಗಮಿಸಿದ ಸಂದರ್ಭಗಳನ್ನು ಹಾಗೂ ದೇವಿಯ ಶಕ್ತಿಯನ್ನು ಸ್ಮರಿಸಿಕೊಂಡರು.
ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ,ಬೈಂದೂರು ಶಾಸಕ ಬಿ.ಎಮ್ .ಸುಕುಮಾರ ಶೆಟ್ಟಿ ,ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಚಂದ್ರ ಶೇಖರ ಶೆಟ್ಟಿ ಕೆರಾಡಿ,
ದೇಗುಲದ ಕಾರ್ಯನಿರ್ವಹಣಾಧಿಕಾರಿ ಮಹೇಶ್,ಉದ್ಯಮಿ ಕೃಷ್ಣಮೂರ್ತಿ ಮಂಜರು, ತಹಶೀಲ್ದಾರ್ ಶೋಭಾಲಕ್ಷ್ಮೀ, ನಿರ್ಮಲಾ ಸೀತಾರಾಮನ್ ರವರ ಸಂಬಂಧಿ ಲಕ್ಷ್ಮೀ ನಾರಾಯಣನ್, , ಮಾಜಿ ಅಧ್ಯಕ್ಷ ಹರೀಶ ಕುಮಾರ್ ಶೆಟ್ಟಿ, ಸದಸ್ಯರಾದ ಡಾ| ಅತುಲ್ ಕುಮಾರ್ ಶೆಟ್ಟಿ, ಗೋಪಾಲಕೃಷ್ಣ ನಾಡ, ಜಯಾನಂದ ಹೋಬಳಿದಾರ್ , ರತ್ನಾ .ಆರ್ . ಕುಂದರ್, ಸಂಧ್ಯಾ ರಮೇಶ ,ಬಿಜೆಪಿ ಬೈಂದೂರು ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.