ನಿಮ್ಮ ಮಕ್ಕಳನ್ನು ಪಠ್ಯದ ಕಲಿಕೆಯ ಪರಿದಿಗೆ ಮಾತ್ರ ಸೀಮಿತಗೊಳಿಸಬೇಡಿ ಎನ್ನುವ ರಾಷ್ಟ್ರಕವಿ ರವೀಂದ್ರನಾಥ ಟಾಗೋರ್ ರವರು ಹೇಳಿದ ಮಾತು ಈಗಿನ ಮಕ್ಕಳ ಪ್ರತಿಭೆ, ಕಲೆ, ಕೌಶಲ್ಯ, ಬುದ್ಧಿವಂತಿಕೆಯನ್ನು ಕಂಡಾಗ ನೂರಕ್ಕೆ ನೂರು ಪ್ರಸ್ತುತ ಅನ್ನಿಸುತ್ತದೆ.
ಪ್ರೋತ್ಸಾಹ ಮತ್ತು ಸಹಕಾರ ದೊರೆತರೆ ಉತ್ತಮ ಕಲಾವಿದರಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣವನ್ನು ನಮ್ಮ ಯುವ ಸಮುದಾಯ ಹೊಂದಿದೆ .ಆ ನಿಟ್ಟಿನಲ್ಲಿ ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಡ್ರಾಮ ಜುನಿಯರ್ ಸೀಜನ್ -4 ಖ್ಯಾತಿಯ ಬಾಲಪ್ರತಿಭೆ ಕುಂದಾಪುರದ ಸಮೃದ್ಧಿ ಶ್ರೀಧರ್ ಮೊಗವೀರರ ಪರಿಚಯವನ್ನು ಕುಂದ ವಾಹಿನಿಯ ಮೂಲಕ ನಿಮ್ಮ ಮುಂದೆ ತೆರೆದಿಡುತ್ತಿದ್ದೇವೆ.
ಅವಳಲ್ಲಿನ ಕಲಾಪ್ರೀತಿ, ತಂದೆಯ ಕನಸು, ಸಾಧಿಸಿಯೇ ಸಾಧಿಸುತ್ತೇನೆ ಎಂಬ ಛಲ, ಕಲೆಯಲ್ಲಿ ಬದುಕಬೇಕೆಂಬ ಹಂಬಲ ಆ ಪಾತ್ರದೊಳಗೆ ಪರಕಾಯ ಪ್ರವೇಶ ಕಾಣುವ ಪ್ರತಿಭೆಯ ಕಾರಂಜಿ ಸಮೃದ್ಧಿ ಎಸ್ .ಮೊಗವೀರ. ಶ್ರೀಧರ್ ಮತ್ತು ಭಾರತಿ ದಂಪತಿಗಳ ಪುತ್ರಿ ಝೀ ಕನ್ನಡದ “ಕನ್ನಡ ಕಣ್ಮಣಿ” ರನ್ನರ್ ಆಪ್ ಪ್ರಶಸ್ತಿ, ಲಾಕ್ಡೌನ್ ಸಂದರ್ಭದಲ್ಲಿನ ಆನ್ ಲೈನ್ ಸ್ಪರ್ಧೆಯಲ್ಲಿನ ಸಾಧನೆಗೆ ಜೊತೆಗೆ ಕರ್ನಾಟಕ ಸರಕಾರದ ಮಕ್ಕಳ ವಾಣಿ ಯುಟ್ಯೂಬ್ ಚಾನೆಲ್ ನಲ್ಲಿ ಉದ್ಘಾಟನಾ ಸಂಚಿಕೆಯಲ್ಲಿ ಮಾನ್ಯಶ್ರೀ ಮುಖ್ಯಮಂತ್ರಿಗಳು ಇವಳ ಕಥೆಯನ್ನು ವೀಕ್ಷಿಸಿ ಉದ್ಘಾಟನೆ, ವರ್ಲ್ಡ್ ಫ್ಯಾಮಿಲಿ ಡೇ ಸೆಲೆಬ್ರೇಶನ್ ಡ್ಯಾನ್ಸ್ ಕಾಂಪಿಟೇಶನ್ ನಲ್ಲಿ ಪ್ರಥಮ ಬಹುಮಾನ ಇವಳ ಜೋಳಿಗೆಯಲ್ಲಿ ಇದೆ.
ತುಳುವಾಸ್ ಡ್ಯಾನ್ಸಿಂಗ್ ಕಾಂಪಿಟೇಷನ್ ನಲ್ಲಿ ಪ್ರಥಮ ಬಹುಮಾನ, ಕಾರಂತರ ಥೀಂ ಪಾರ್ಕ್ ಕೋಟ ಇವರು ನಡೆಸಿದ ಮಾತುಗಾರಿಕೆಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಕಥೆ ಹೇಳುವ ಸ್ಪರ್ಧೆ ಪ್ರಥಮ ಬಹುಮಾನ, ಜೆ ಸಿ ಐ ಬ್ರಹ್ಮಾವರ ನಡೆಸಿದ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಕಿರುಚಿತ್ರ ಗೂಡಂಗಡಿಯಲ್ಲಿ ಪ್ರಧಾನಪಾತ್ರ ವನ್ನು ಸಮ್ರದ್ದಿ ಅದ್ಬುತವಾಗಿ ನಿರ್ವಹಿಸಿರುತ್ತಾರೆ . ಇನ್ನೂ ಮೂರು ಇವಳ ಮುಖ್ಯಪಾತ್ರದ ಕಿರುಚಿತ್ರಗಳು ಬಿಡುಗಡೆಗಾಗಿ ಕಾಯುತ್ತಿದೆ.
ಸಮೃದ್ಧಿ ಭಾಗವಹಿಸಿದ ಟಿವಿ ಕಾರ್ಯಕ್ರಮಗಳು-ಕನ್ನಡದ ಕಣ್ಮಣಿ,ವೀಕೆಂಡ್ ವಿತ್ ರಮೇಶ್, ಕರುನಾಡ ಹಬ್ಬ, ಝೀ ಕುಟುಂಬ ಅವಾರ್ಡ್,ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಬೆಂಗಳೂರು ಪ್ರೆಸ್ ಕ್ಲಬ್ ಇನ್ ಅವರ ಬೀದಿನಾಟಕದ ಜಾಗ್ರತಿ ಕಾರ್ಯಕ್ರಮದಲ್ಲಿ ಭಾಗಿ, 32 ಕಡೆ ಮುದ್ದುಕೃಷ್ಣ ಪ್ರಶಸ್ತಿ ಹಾಗೂ ಮುದ್ದು ರಾಧೆ ಪ್ರಶಸ್ತಿ ( ರಾಜ್ಯ ಜಿಲ್ಲಾ ಮತ್ತು ತಾಲೂಕು ), ಯಕ್ಷೋತ್ಸವ ಪ್ರಶಸ್ತಿ, ಆಧ್ಯಾತ್ಮಕ ಪತ್ರಿಕೆಯ ರಾಜ್ಯಮಟ್ಟದ ಕಲಾವಿದೆ ಪ್ರಶಸ್ತಿ, ಭಗದ್ಗೀತೆಯಲ್ಲಿ ತಾಲೂಕು ಮಟ್ಟದ ಪ್ರಶಸ್ತಿ, ಫ್ಯಾನ್ಸಿ ಡ್ರೆಸ್ ಕಾಂಪಿಟೇಶನ್ ಲ್ಲಿ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಮೂರು ಪ್ರಶಸ್ತಿಗಳು . ಇದುವರೆಗೆ 24 ವೇದಿಕೆಗಳಲ್ಲಿ ಪ್ರದರ್ಶನ ನೀಡಿರುವ ಹೆಗ್ಗಳಿಕೆ, 27 ವೇದಿಕೆಗಳಲ್ಲಿ ಸನ್ಮಾನಗೊಂಡಿದ್ದಾರೆ.
ಗೋವರ್ಧನ ಗಿರಿ ಮಹಾಲಯ ಕ್ಷೇತ್ರ ಬಸವನಗುಡಿ ಬೆಂಗಳೂರು ಇವರು ನಡೆಸಿದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ,
ದ್ವಾರಕಾಮಯಿ ಶ್ರೀ ಸಾಯಿಬಾಬಾ ಶಂಕರಪುರ ಉಡುಪಿ ಇವರು ನಡೆಸಿದ ಸಾಯಿಬಾಬಾ ಫ್ಯಾನ್ಸಿ ಡ್ರೆಸ್ ಕಾಂಪಿಟೇಶನ್ ನಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.ಸಮೃದ್ಧಿ ಇದುವರೆಗೆ ನಟಿಸಿದ ಚಿತ್ರಗಳು ಗಿರ್ಮಿಟ್, ಮೂಕಜ್ಜಿಯ ಕನಸು,ಮೋರ್ಡನ್ ಮಹಾಭಾರತ, ದಿ -ಬೆಸ್ಟ್ ಆಕ್ಟರ್ ,ಕಿರುಚಿತ್ರ ನಕ್ಷತ್ರದಲ್ಲಿ ಪ್ರಧಾನಪಾತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಹಲವಾರು ಖಾಸಗಿ ಸುದ್ದಿ ವಾಹಿನಿಗಳಲ್ಲಿ ಸಂದರ್ಶನ ನೀಡಿರುವ ಸಮ್ರದ್ದಿ ಹೆಸರಿಗೆ ತಕ್ಕಂತೆ ಪ್ರತಿಭಾ ಸಂಪನ್ನೆ. ಮಗಳ ಈ ಎಲ್ಲಾ ಸಾಧನೆಯ ಹಿಂದೆ ತಂದೆ ಶ್ರೀಧರ ಕೆಳಹಿತ್ಲು ಮನೆ ತಲ್ಲೂರು ಜೊತೆಗೆ ತಾಯಿ ಭಾರತಿಯ ಅವಿರತ ಪ್ರಯತ್ನ ಇದೆ ಎನ್ನುವುದನ್ನು ಮರೆಯಲಾಗದು. ಆ ನಿಟ್ಟಿನಲ್ಲಿ ಸಮ್ರದ್ದಿಯ ಹೆತ್ತವರಿಗೆ ನಾವು ಒಂದು ಸಲ್ಯೂಟ್ ಹೊಡೆಯಲೇಬೇಕು.
ಆದರೆ ಇಲ್ಲಿ ಹೇಳಲೇಬೇಕಾದ ವಿಷಯಳು ಸಾಕಷ್ಟಿದೆ.ಸಮ್ರದ್ದಿಯ ಕಲೆಯ ಕಲಿಕೆಯ ಓಟಕ್ಕೆ ಬಡತನ ಎಂಬ ಪೆಡಂಭೂತ ಮದ್ಯದಲ್ಲಿ ಬ್ರೇಕ್ ಹಾಕುತ್ತಿರುವುದನ್ನು ನಾನು ಇಲ್ಲಿ ನೋವಿನಿಂದಲೇ ಉಲ್ಲೇಖಿಸಲೇ ಬೇಕಾಗುತ್ತದೆ.ಸಮೃದ್ಧಿ ಈಗ ಕನ್ನಡ ಮಾಧ್ಯಮದಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ನಾಲ್ಕನೇ ತರಗತಿ ತನಕ ಆಂಗ್ಲಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದ ಇಕೆ ತಂಗಿ ಸಾನಿಧ್ಯ ಮತ್ತು ತನಗೆ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುವುದಕ್ಕೆ ಹೆತ್ತವರಿಗೆ ಹಣಕಾಸಿನ ತೊಂದರೆಯಾಗುತ್ತದೆಂದು ತಿಳಿದು ಅಕ್ಕ ತಂಗಿ ಇಬ್ಬರೂ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಮನೆಯ ಬಡತನ ಮತ್ತು ಆರ್ಥಿಕ ದುಸ್ಥಿತಿಯಿಂದಾಗಿ ಇಬ್ಬರು ಮಕ್ಕಳು ಮತ್ತು ತಂದೆ ತಾಯಿ ಕೋಟೇಶ್ವರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ತಂದೆ ಶ್ರೀಧರ್ ಮೊಗವೀರ ಚಿಕ್ಕದೊಂದು ಮೊಬೈಲ್ ಸರ್ವಿಸ್ ಶಾಪ್ ಹೊಂದಿದ್ದು, ಬಂದ ಆದಾಯವನ್ನು ಕೂಡಿಟ್ಟು ಮಗಳನ್ನು ಉತ್ತಮ ಕಲಾವಿದೆಯಾಗಿ ಕಾಣಬೇಕೆಂದು ಹಂಬಲ ಮತ್ತು ದೊಡ್ಡ ಕನಸು ಕಂಡಿದ್ದಾರೆ.
ಝೀ ಟಿವಿ ಯಂತಹ ವೇದಿಕೆ ಹತ್ತುವುದು ಮತ್ತು ಅಲ್ಲಿ ಸ್ಪರ್ಧಿಸಿ ಗೆಲ್ಲುವುದು ಸಾಮಾನ್ಯದ ಮಾತಲ್ಲ. ಎಲ್ಲಾ ತಂದೆ ತಾಯಿಗಳು ತಮ್ಮ ಮಕ್ಕಳ ಶ್ರೇಯಸ್ಸಿಗಾಗಿ ಹೋರಾಡುವುದು ಸರ್ವೇಸಾಮಾನ್ಯ. ಆದರೆ ಶ್ರೀಯುತ ಶ್ರೀಧರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಗಳ ಪ್ರತಿಯೊಂದು ಕಲಾಪ್ರಕಾರಕ್ಕೆ ಕೈ ಹಿಡಿದು ಮುಂದೆ ಹೆಜ್ಜೆ ಹಾಕುತ್ತಿರುವುದು ಪ್ರಶಂಸನೀಯ.
ಇಂತಹ ಸಮಯದಲ್ಲಿ ಕಲಾಪ್ರೋತ್ಸಾಹಕರು, ಸಮಾಜದ ಗಣ್ಯ ವ್ಯಕ್ತಿಗಳು ಯಾರು ನಮ್ಮ ಸಹಾಯಕ್ಕೆ ಬರಲಿಲ್ಲ ಸಹಕಾರ ಮತ್ತು ಪ್ರೋತ್ಸಾಹ ನೀಡಲಿಲ್ಲ ಎಂದು ಶ್ರೀಧರ್ ನೋವು ತೋಡಿಕೊಂಡಾಗ ನಾನು ಮೂಕನಾದೆ.ಸಮೃದ್ಧಿ ಪ್ರಸ್ತುತ ಜೀ ಕನ್ನಡ ಡ್ರಾಮಾ ಜೂನಿಯರ್ ಸೀಜನ್ 4 ಅಭ್ಯರ್ಥಿ ಈ ವೇದಿಕೆ ಹತ್ತುವುದು,
ಜನರ ಹೃದಯ ಗೆದ್ದಿರುವುದು ಸಾಧನೆಯೇ ಸರಿ.
ಇಂದು ಸಮ್ರದ್ದಿ ಪ್ರತಿಭೆಗೆ ತಕ್ಕ ಪಾತ್ರಗಳು ಮತ್ತು ಪಾತ್ರಕ್ಕೆ ನ್ಯಾಯವನ್ನು ಸಲ್ಲಿಸುವುದರ ಜೊತೆಗೆ ತೀರ್ಪುಗಾರರ ಬೆಂಬಲದಿಂದಲೂ, ಅಭಿಮಾನಿಗಳಿಂದಲೂ ಆಶೀರ್ವಾದವನ್ನು ಪಡೆದುಕೊಂಡು ಮುಂದೆ ಸಾಗುತ್ತಿದ್ದಾಳೆ. ಎಲ್ಲಾ ವೀಕ್ಷಕ ಅಭಿಮಾನಿಗಳಿಗೂ ಸಮೃದ್ಧಿ ನಮ್ಮ ಮನೆಮಗಳು ಎಂಬ ಭಾವನೆ ಮೂಡಲಿ.ಎಲ್ಲರ ಸಹಾಯ-ಸಹಕಾರ ಪ್ರೀತಿ ಸದಾ ದೊರೆಯಲಿ , ಇಕೆಯ ಕಲೆಗೆ ಪ್ರೋತ್ಸಾಹ ಇರಲಿ ಡ್ರಾಮಾ ಜೂನಿಯರ್ ಸೀಜನ್ 4 ನಲ್ಲಿ ಸಮೃದ್ಧಿ ಗೆದ್ದು ಬರಲಿ ಎಂಬುವುದೇ ನಮ್ಮ ಕುಂದಾ ವಾಹಿನಿ ಬಳಗದ ಆಶಯ.
( ಸಮೃದ್ಧಿ ಶ್ರೀಧರ್ ಮೊಗವೀರ- 7899564581)
ಲೇಖನ :ಈಶ್ವರ್ ಸಿ ನಾವುಂದ (9833259692)