ಹೆಮ್ಮಾಡಿ ( ಆ ,15): ಕಲೆ ಶ್ರೀಮಂತವಾದುದ್ದು ಆದರೆ ಬಹುತೇಕ ಕಲಾವಿದರ ಜೀವನ ಶ್ರೀಮಂತವಾಗಿರುವುದಿಲ್ಲ. ಹಲವಾರು ಕಷ್ಟ ಕಾರ್ಪಣ್ಯಗಳಿಂದ ತುಂಬಿದರು ರಂಗದಲ್ಲಿ ಪ್ರೇಕ್ಷಕರನ್ನು ರಂಜಿಸುವುದನ್ನು ಕಡಿಮೆ ಮಾಡುವುದಿಲ್ಲ. ಇಂತಹ ಒಬ್ಬ ಯುವ ಯಕ್ಷಗಾನ ಕಲಾವಿದ ನಾಗರಾಜ ಪೂಜಾರಿ ದೇವಲ್ಕುಂದ.
ಇವರು ಕಳೆದ ಹತ್ತು ವರ್ಷಗಳಿಂದ ಹಟ್ಟಿಯಂಗಡಿ,ಪೇರ್ಡೂರು,ಕಳೆದ ನಾಲ್ಕು ವರ್ಷಗಳಿಂದ ಶ್ರೀ ಕಮಲಶಿಲೆ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ನಾಗರಾಜ ಪೂಜಾರಿಯವರು ತಮ್ಮ ವಾಸದ ಮನೆಯು ಶಿಥಿಲವಾಗಿರುವುದರಿಂದ ಹೊಸ ಗೃಹ ನಿರ್ಮಾಣ ಸಹಾಯಾರ್ಥ ಇದೆ ತಿಂಗಳ 19 ಆದಿತ್ಯವಾರ ಸಂಜೆ ಬಗ್ವಾಡಿ ಕ್ರಾಸ್ ಹತ್ತಿರ ಇರುವ ಶ್ರೀ ಬಟ್ಟೆ ವಿನಾಯಕ ದೇವಸ್ಥಾನದ ಆವರಣದಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು ಮತ್ತು ಪ್ರಖ್ಯಾತ ಅತಿಥಿ ಕಲಾವಿದರಿಂದ ಗದಾಯುದ್ಧ ರುದ್ರಕೋಪ ಎಂಬ ಯಕ್ಷಗಾನವನ್ನು ಆಯೋಜಿಸಿದ್ದಾರೆ.

ತನ್ನ ಗೃಹ ನಿರ್ಮಾಣಕ್ಕೆ ತನು ಮನ ಧನ ಸಹಾಯವನ್ನಿತ್ತು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಯಶಸ್ವಿಯಾಗಿಸಬೇಕೆಂದು ವಿನಂತಿಸಿದ್ದಾರೆ.
ವರದಿ : ರಾಘವೇಂದ್ರ ಹರ್ಮಣ್











