ಕುಂದಾಪುರ (ಜೂ ,22: ಎಕ್ಸಲೆಂಟ್ ಹೈಸ್ಕೂಲು ಮತ್ತು ಪಿಯು ಕಾಲೇಜು ಸುಣ್ಣಾರಿಯಲ್ಲಿ2022-23 ನೇ ಸಾಲಿನ ಪಾಲಕರ ಹಾಗೂ ಶಿಕ್ಷಕರ ಸಭೆಯನ್ನು ಇತ್ತೀಚೆಗೆ ಆಯೋಜಿಸಲಾಗಿತು.

ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿೆ ಅವರು ಮಾತನಾಡಿ ಎಕ್ಸಲೆಂಟ್ ವಿದ್ಯಾ ಸಂಸ್ಥೆ ಗುಣಮಟ್ಟದ ಶಿಕ್ಷಣವನ್ನ ಗುರಿಯಾಗಿಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಹಾಗೂ ಸರ್ವಾಂಗೀಣ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾ ಬಂದಿದೆ. ಒಬ್ಬ ಯಶಸ್ವಿ ವಿದ್ಯಾರ್ಥಿಯ ಸಾಧನೆಗೆ ಪೋಷಕರ ಸಹಕಾರ ಮತ್ತು ಶಿಕ್ಷಕರ ಮಾರ್ಗದರ್ಶನ ಅತೀ ಅಗತ್ಯವಾಗಿರುತ್ತದೆ. ನಮ್ಮ ವಿದ್ಯಾ ಸಂಸ್ಥೆಯ ವಿಶೇಷತೆಗಳನ್ನು ಗಮನಿಸಿ ನೂರಾರು ಸಂಖ್ಯೆಯಲ್ಲಿ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳ ಕನಸನ್ನ ಸಾಕಾರಗೊಳಿಸುವಲ್ಲಿ ಆಡಳಿತ ಮಂಡಳಿ ಕಾರ್ಯವನ್ನು ನಿರ್ವಹಿಸುತ್ತದೆ ಎಂದು ತಿಳಿಸುತ್ತಾ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ನ ಖಜಾಂಚಿಯವರಾದ ಶ್ರೀ ಭರತ್ ಶೆಟ್ಟಿಯವರು ಮಾತನಾಡಿ ಶಿಸ್ತು, ಅಭ್ಯಾಸ ಮತ್ತು ಸತತ ಪರಿಶ್ರಮವೇ ಸಾಧನೆಯ ಮೂಲ ಮಂತ್ರ ಎಂದು ತಿಳಿಸಿದರು. ಇಂಗ್ಲೀಷ್ ಉಪನ್ಯಾಸಕ ಪ್ರಕಾಶ್ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು.











