ಹೆಮ್ಮಾಡಿ(ಅ.27): ಸರಕಾರಿ ಪಿ ಯು ಕಾಲೇಜು ಹೊಸಂಗಡಿ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ 2023, ಇದರ ಉದ್ಘಾಟನಾ ಕಾರ್ಯಕ್ರಮವು ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ ಕಮಲಶಿಲೆಯಲ್ಲಿ ಅಕ್ಟೋಬರ್ 25 ರಂದು ಜರಗಿತು.
ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ ಕಮಲಶಿಲೆ ಇದರ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಸಚ್ಚಿದಾನಂದ ಚಾತ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು.. ಆಜ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮಾ.ವ್ಯ.ಸೇ.ಸ.ಸಂ.ನಿ. ಮಾನಂಜೆ ಇದರ ಮಾಜಿ ಅಧ್ಯಕ್ಷರರಾದ ಶ್ರೀ ಎ. ಬಾಲಚಂದ್ರ ಭಟ್ .ಇವರು ಶುಭಶಂಸನೆಗೈದರು.
ಸ.ಪ.ಪೂ. ಕಾಲೇಜು ಹೊಸಂಗಡಿ ಇದರ ಪ್ರಾಂಶುಪಾಲರಾದ ಶ್ರೀ ಗೋಪಾಲ ಭಟ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು,ಮುಖ್ಯ ಅತಿಥಿಗಳಾಗಿ ಶ್ರೀಮತಿ ಸವಿತಾ ಎರ್ಮಾಳ್ ಎನ್. ಎಸ್.ಎಸ್.ವಿಭಾಗಧಿಕಾರಿ ಮಂಗಳೂರು, ಮಾರ್ಗದರ್ಶನ ಮಾಡಿದರು. ಶ್ರೀ ಭಾಸ್ಕರ್ ಶೆಟ್ಟಿ ಕಾರ್ಯಧ್ಯಕ್ಷರು ಸ.ಪ.ಪೂ. ಕಾಲೇಜು ಹೊಸಂಗಡಿ, ಶ್ರೀ ಉದಯ ನಾಯ್ಕ್ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಸ.ಪ.ಪೂ.ಕಾಲೇಜು ಹೊಸಂಗಡಿ,ಶ್ರೀ ಚಂದ್ರ ಜೋಗಿ ಶಾನ್ಕಟ್ಟು,ಕಾರ್ಯದರ್ಶಿ ಹಳೆ ವಿದ್ಯಾರ್ಥಿ ಸಂಘ ಸ.ಪ.ಪೂ. ಕಾಲೇಜು ಹೊಸಂಗಡಿ, ಶ್ರೀ ವೇಣುಗೋಪಾಲ ಶೆಟ್ಟಿ ಸದಸ್ಯರು ಗ್ರಾಮ ಪಂಚಾಯತ್ ಆಜ್ರಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅರ್ಥಶಾಸ್ತ್ರ ಉಪನ್ಯಾಸಕರರಾದ ಶ್ರೀ ಪ್ರಣೀತ್ ಶೆಟ್ಟಿ ಧನ್ಯವಾದಗೈದರು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಶ್ರೀ ರಣಜಿತ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಣೆಗೈದರು.