ಕುಂದಾಪುರ (ಸೆ. 11) : ಇತ್ತೀಚೆಗೆ ಗೋವಾ ,ಆಂಧ್ರಪ್ರದೇಶ ,ಕರ್ನಾಟಕ ರಾಜ್ಯಗಳನ್ನೊಳಗೊಂಡ ಲಯನ್ಸ್ ಮಲ್ಟಿಪಲ್ ಜಿಲ್ಲೆ 317 ನ ಮಲ್ಟಿಪಲ್ ಸ್ಟಾರ್ ಲಯನ್ ಅವಾರ್ಡ್ ನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರೂಪಕ ಅಕ್ಷಯ ಹೆಗ್ಡೆ ಮೊಳಹಳ್ಳಿ ಸ್ವೀಕರಿಸಿದರು. ಇವರು ಮೂರು ಬಾರಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ, ಲಯನ್ಸ್ ವಿಚಾರ ಸಂಕೀರ್ಣ ಮತ್ತು ಸಮ್ಮೇಳನಗಳ ಜಿಲ್ಲಾಧ್ಯಕ್ಷರಾಗಿ, ಲಯನ್ಸ್ ಜಿಲ್ಲಾ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಗೆದ್ದು ಕೊಂಡಿದ್ದಲ್ಲದೇ, ತನ್ನ ಕ್ಲಬ್ನಲ್ಲಿ ತನ್ನ ಅವಧಿಯಲ್ಲಿ 200 % ಮೆಂಬರ್ ಶಿಪ್ ಗ್ರೋತ್ ಕೊಟ್ಟಿದ್ದಲ್ಲದೇ, ಒಂದು ಲಿಯೋ ಕ್ಲಬ್ ಮತ್ತು ಮೂರು ಲಯನ್ಸ್ ಕ್ಲಬ್ಗಳನ್ನು ಲಯನ್ಸ್ ಜಿಲ್ಲೆಗೆ ನೀಡಿದ್ದು ಅತ್ಯುತ್ತಮ ಕ್ಲಬ್ ವಿಸ್ತರಣಾಧ್ಯಕ್ಷ ಎನಿಸಿದ್ದರು.
ಈ ಹಿಂದೆ ಇವರು ಎಮರ್ಜಿಂಗ್ ಲಯನ್ ಆಫ್ ದ್ ಡಿಸ್ಟ್ರಿಕ್ಟ್ ,ಮಲ್ಟಿಪಲ್ ಯಂಗ್ ಲಯನ್ ,ಬೆಸ್ಟ್ ಎಕ್ಸ್ಟೇನಶನ ಚೇರ್ ಮ್ಯಾನ್ ಅವಾರ್ಡ್ ಅಲ್ಲದೇ ಇಂಟರ್ನ್ಯಾಷನಲ್ ಲೀಡರ್ ಶಿಪ್ ಅವಾರ್ಡ್ ಗೂ ಭಾಜನರಾಗಿದ್ದರು. ಕಳೆದ ಲಯನ್ಸ್ ವರ್ಷದಲ್ಲಿ ಇಂಟರ್ನ್ಯಾಷನಲ್ ಪ್ರೆಸಿಡೆಂಟ್ ಪ್ರೋಗ್ರಾಂ ಡಿಸ್ಟ್ರಿಕ್ಟ್ ಚೀಫ್ ಕೋ ಆರ್ಡಿನೇಟರ್ ಆಗಿದ್ದರು. ಇವರು ಪ್ರಸ್ತುತ ದಶಮ ಸಂಭ್ರಮದ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಕೋಶಾಧಿಕಾರಿಯಾಗಿ, ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾಗಿ, ಅರ್ಥಶಾಸ್ತ್ರ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿಯಾಗಿರುತ್ತಾರೆ. ಎರಡು ಸಾವಿರಕ್ಕೂ ಅಧಿಕ ವಿವಿಧ ಸರ್ಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳನ್ನು ನಿರೂಪಿಸಿದ ಖ್ಯಾತಿ ಇವರದ್ದು .