ಬೈಂದೂರು(ಜ.14): ಬೈಂದೂರು ತಾಲೂಕಿನ ಹೇರೂರು ಗ್ರಾಮದ ಕೆಳಾಹೇರೂರಿನ ಶ್ರೀ ದುರ್ಗಾಂಬಿಕೆ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಜನವರಿ 16 ನೇ ಗುರುವಾರದಂದು ಜರುಗಲಿದೆ.
ಭಕ್ತಾದಿಗಳು ಸಕುಟುಂಬ ಸಮೇತರಾಗಿ ಆಗಮಿಸಿ, ಶ್ರೀದೇವರ ಸನ್ನಿಧಾನದಲ್ಲಿ ನಡೆಯುವ ಧಾರ್ಮಿಕ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸಿ, ಮಧ್ಯಾಹ್ನದ ಮಹಾ ಅನ್ನಸಂತರ್ಪಣೆಯ ಮಹಾಪ್ರಸಾದವನ್ನು ಸ್ವೀಕರಿಸಿ, ಶ್ರೀದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇಗುಲದ ಮೊಕ್ತೇಸರರಾದ ಶ್ರೀ ಮಹಾಬಲ ಶೆಟ್ಟಿ ಗರಡಿ ಮನೆ ಹಾಗೂ ಗರಡಿಮನೆ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.