ಹೆಮ್ಮಾಡಿ(ಸೆ,16): ಇಲ್ಲಿನ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದಸರಾ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಹಲವು ವಿಭಾಗಗಳಲ್ಲಿ ಭಾಗವಹಿಸಿ ಬಹುಮಾನಗಳನ್ನುಪಡೆದಿರುತ್ತಾರೆ.

ಕ್ರಮವಾಗಿ ಹುಡುಗಿಯರ ಜಾವೆಲಿನ್ ತ್ರೋ ವಿಭಾಗದಲ್ಲಿ ಕುಮಾರಿ ಸಿಂಚನ ಪ್ರಥಮ ಪಿ.ಯು.ಸಿ. ದ್ವಿತೀಯ ಸ್ಥಾನ, ಹುಡುಗಿಯರ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಕುಮಾರಿ ಉನ್ನತಿ ಶೆಟ್ಟಿ ದ್ವಿತೀಯ ಪಿ.ಯು.ಸಿ ದ್ವಿತೀಯ ಸ್ಥಾನ, ಹುಡುಗಿಯರ ಡಿಸ್ಕಸ್ ತ್ರೋ ವಿಭಾಗದಲ್ಲಿ ಕುಮಾರಿ ಅಭಿಜ್ಞಾ ಪ್ರಥಮ ಪಿ.ಯು.ಸಿ. ತ್ರತೀಯ ಸ್ಥಾನ,ಹುಡುಗಿಯರ ಜಾವೆಲಿನ್ ತ್ರೋ ವಿಭಾಗದಲ್ಲಿ ಕುಮಾರಿ ಆರ್ಥಿಕ ಶೆಟ್ಟಿ ದ್ವಿತೀಯ ಪಿ.ಯು.ಸಿ. ತ್ರತೀಯ ಸ್ಥಾನ, ಹುಡುಗರ 800 ಮೀಟರ್ ಹಾಗೂ 400 ಮೀಟರ್ ಓಟದಲ್ಲಿ ಸೂರಜ್ ಡಯಾಸ್ ದ್ವಿತೀಯ ಪಿ.ಯು.ಸಿ. ಕ್ರಮವಾಗಿ ದ್ವಿತೀಯ ಸ್ಥಾನ, ಹುಡುಗರ ಗುಂಡೆಸೆತ ಸ್ಪರ್ಧೆಯಲ್ಲಿ ಆರ್ಯ ದ್ವಿತೀಯ ಪಿ.ಯು.ಸಿ.ತ್ರತೀಯ ಸ್ಥಾನ, ಹುಡುಗಿಯರ 3000 ಮೀಟರ್ ಓಟ ಹಾಗೂ 1500 ಮೀಟರ್ ಓಟದಲ್ಲಿ ಕುಮಾರಿ ಶಿವಾನಿ ದ್ವಿತೀಯ ಪಿ.ಯು.ಸಿ ಕ್ರಮವಾಗಿ ದ್ವಿತೀಯ ಹಾಗೂ ತ್ರತೀಯ ಸ್ಥಾನ ಪಡೆದಿರುತ್ತಾರೆ.

ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.









