ಮಾಹಿತಿ ಹಕ್ಕು ಕಾಯ್ದೆಯು ಭಾರತೀಯ ನಾಗರಿಕರಿಗಿರುವ ಒಂದು ಪ್ರಬಲ ಅಸ್ತ್ರವಾಗಿದ್ದು, ನಮ್ಮ ಆಡಳಿತ ವ್ಯವಸ್ಥೆಯ ಲೋಪದೋಷಗಳನ್ನು ಬಯಲಿಗೆಳೆಯಲು ಇರುವಂತಹ ಪ್ರಮುಖ ಮಾರ್ಗವಾಗಿದೆ ಎಂದು ಮುಖ್ಯಮಂತ್ರಿಗಳ ಮಾಜಿ ಕಾನೂನು ಸಲಹೆಗಾರರಾಗಿರುವ ಕೆ .ದಿವಾಕರ್ ಹೇಳಿದರು
ಅವರು ಕುಂದಾಪುರದ ಕುಂದೇಶ್ವರ ರಸ್ತೆಯ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಿ.ಎ , ಸಿ.ಎಸ್. ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾಹಿತಿ ಹಕ್ಕು ಕಾಯ್ದೆ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸಂಸ್ಥೆಯ ಮುಖ್ಯಸ್ಥರಾದ ಭರತ್ ಶೆಟ್ಟಿ ಮಾತನಾಡಿ ಮಾಹಿತಿ ಹಕ್ಕುಗಳ ಕುರಿತು ದೇಶದ ಪ್ರತಿಯೊಬ್ಬ ಪ್ರಜೆಗಳಿಗೂ ತಿಳುವಳಿಕೆ ಇರುವುದು ಅಗತ್ಯವಾಗಿದೆ ಎಂದು ಹೇಳಿದರು. ಸಂಸ್ಥೆ ಮುಖ್ಯಸ್ಥರಾದ ಪ್ರತಾಪಚಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಿ.ಎ. ಮತ್ತು ಸಿ.ಎಸ್. ವಿದ್ಯಾರ್ಥಿಗಳು ಮುಖ್ಯ ಅತಿಥಿಯವರೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು. ಶ್ರೇಯ ಭಟ್ ಸ್ವಾಗತಿಸಿದರು, ಸಂಪ್ರೀತಾ ಶೆಟ್ಟಿ ಧನ್ಯವಾದಗೈದರು. ಅಂಕಿತ ಕಾರ್ಯಕ್ರಮವನ್ನು ನಿರ್ವಹಿಸಿದರು.