ಕುಂದಾಪುರ(ಮಾ.18): `ಸಮಾಜ ಸೇವೆ ನಾಡಿನ ಪ್ರತಿಯೋರ್ವ ನಾಗರಿಕನ ಕರ್ತವ್ಯವಾಗಬೇಕು. ಸಮಾಜದ ಋಣವನ್ನು ತೀರಿಸುವ ಜವಾಬ್ದಾರಿ ಪ್ರತಿಯೊಬ್ಬರಿಗೂ ಇದೆ. ಈ ನೆಲೆಯಲ್ಲಿ ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ) ಕುಂದಾಪುರ ಮಾಡುತ್ತಿರುವ ಸಮಾಜಸೇವೆ ಪ್ರತಿಯೊಬ್ಬರಿಗೂ ಮಾದರಿ’ ಎಂದು ಪತ್ರಕರ್ತೆ ಹಾಗೂ ನಿರೂಪಕರಾದ ಜೇಸಿ ಅಕ್ಷತಾ ಗಿರೀಶ್ ಅಬಿಪ್ರಾಯ ಪಟ್ಟರು.
ಅವರು ಜೈ ಕುಂದಾ ಸೇವಾ ಟ್ರಸ್ಟ್ (ರಿ) ಕುಂದಾಪುರ ಇದರ ಆಶ್ರಯದಲ್ಲಿ ಕೊಟೇಶ್ವರ ಸನ್ ವಿಜಯ ಕಾಂಪ್ಲೆಕ್ಸ್ ಆರಂಭಗೊoಡ ನೂತನ ಕಚೇರಿ ಉದ್ಘಾಟನೆ, ಸಹಾಧನ ಹಸ್ತಾಂತರ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಕೊಟೇಶ್ವರದ ಮಿತ್ರ ಕ್ಲಿನಿಕ್ ನ ವೈದ್ಯರಾದ ಡಾ. ರಾಜೇಶ್ ಮಾತನಾಡಿ ಕುಂದಾಪುರ ಪರಿಸರದಲ್ಲಿ ಜೈ ಕುಂದಾಪ್ರ ಸೇವಾ ಟ್ರಸ್ಟ್ ಮಾಡುತ್ತಿರುವ ಕಾರ್ಯ ಇಂದಿನ ತಲೆಮಾರಿನ ತರುಣರಿಗೆ ಮಾರ್ಗದರ್ಶಕ. ನೂರಕ್ಕೂ ಜಾಸ್ತಿ ಯೋಜನೆಗಳನ್ನು ಹಮ್ಮಿಕೊಂಡ ಈ ಸಂಸ್ಥೆ
ಅಭಿನoದನೆಗೆ ಅರ್ಹ’ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಂದಾಪುರದ ಗೋಡೆ ವಿಡಿಯೋ ಮತ್ತು ಸ್ಟುಡಿಯೋ ಮಾಲಕರಾದ ದಿನೇಶ್ ಗೋಡೆ, ಸಮಾಜಸೇವಕ ಮತ್ತು ಉದ್ಯಮಿಗಳಾದ ರಮೇಶ್ ಕುಲಾಲ್ ಹೆಂಗವಳ್ಳಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜಸೇವಕ
ಸಾಯಿನಾಥ್ ಶೇಟ್, ಸಮಾಜ ಸೇವಕ ರಾಕೇಶ್ ಶೆಟ್ಟಿ, ರಕ್ತದಾನಿ ಸುರೇಂದ್ರ ಸಂಗಮ್, ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ) ಕುಂದಾಪುರದ ಪಧಾದಿಕಾರಿಗಳು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕುಮಾರಿ ಅಂಶು ಹಳ್ಳಿಹೊಳೆ, ಜನ್ಯ ನೇರಂಬಳ್ಳಿ, ಮತ್ತು ಸುಕನ್ಯಾ ಕೊರ್ಗಿ ಅವರಿಗೆ ಸಹಾಯಧನ ಹಸ್ತಾಂತರಿಸಲಾಯ್ತು. ಕಾರ್ಯಕ್ರಮದಲ್ಲಿ ಕ್ರೀಡಾ ಸಾಧಕಿ ಚಾರ್ವಿ, ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ ಸಮಾಜ ಸೇವಕರಾದ ಸುರೇಂದ್ರ ಸಂಗಮ್ ಮತ್ತು ಕೋಟ ಸಂತು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ 2024-26ನೇ ಸಾಲಿಗೆ ನೂತನ ಪಧಾಧಿಕಾರಿಗಳಾಗಿ ಪಾಲ್ಗೊಂಡ ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ) ಕುಂದಾಪುರದ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಲಾಯಿತು.
ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ) ಕುಂದಾಪುರ ಇದರ ಸಂಸ್ಥಾಪಕರು ಮತ್ತು ಅಧ್ಯಕ್ಷರಾಗಿರುವ ಪುಂಡಲಿಕ ಮೊಗವೀರ ಅವರು ಪ್ರಸ್ತಾವನೆಯ ಮಾತುಗಳನ್ನಾಡಿದರು. ಕಾರ್ಯದರ್ಶಿ ದಿವ್ಯಾ ಕುಂದಾಪುರ ಧನ್ಯವಾದ ಸಮರ್ಪಿಸಿದರು. ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು.