ತಲ್ಲೂರು(ಸೆ,17); ಅಂತರಾಷ್ಟ್ರೀಯ ಖ್ಯಾತಿಯಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 75ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ಉಪ್ಪಿನ ಕುದ್ರುವಿನ ಗೊಂಬೆಮನೆಯಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಯಕ್ಷಗಾನ ಗೊಂಬೆಯಾಟದ ಆರ್ಥಧಾರಿ ನಾರಾಯಣ ಬಿಲ್ಲವರಿಗೆ ನುಡಿ ನಮನ ಸಲ್ಲಿಸಲಾಯಿತು.
ಬಡಗು ತಿಟ್ಟಿನ ಖ್ಯಾತ ಭಾಗವತರಾದ ಶ್ರೀ ಉಮೇಶ್ ಸುವರ್ಣ ರವರು ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥನೆಗೈದರು. ಶ್ರೀಮತಿ ರಶ್ಮಿ ರಾಜ್ ಮತ್ತು ತಂಡದವರು ವಿಷ್ಣು ಸಹಸ್ರನಾಮ ಪಠಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಗೆಯೇ ಕಾರ್ಯಕ್ರಮದಲ್ಲಿ ಜನಾರ್ದನ ಹಂದೆಯವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು.
ವಿಶ್ವಂಭರ ಐತಾಳ್ ಅಸೋಡು, ಜನಾರ್ಧನ ಹಂದೆ, ಸುಜಯೀಂದ್ರ ಹಂದೆ, ಶ್ರೀಪತಿ ಆಚಾರ್ಯ, ಡಾ| ಕಾಶೀನಾಥ್ ಪೈ, ರಾಮ ಎಂ. ಚಂದನ್, ಶಂಕರ ಬಿಲ್ಲವ, ರಾಘವೇಂದ್ರ ನೆಂಪು ಹಾಗೂ ಅಕಾಡೆಮಿಯ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಶಿಕ್ಷಕ ಉದಯ ಭಂಡಾರ್ಕರ್ ವಂದಿಸಿದರು.ನಾಗೇಶ್ ಶ್ಯಾನುಭಾಗ್, ಬಂಟ್ವಾಡಿಯವರು ಕಾರ್ಯಕ್ರಮ ನಿರೂಪಿಸಿದರು.