ಬೈಂದೂರು(ಸೆ.27): ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.),ಉಪ್ಪುಂದ ವತಿಯಿಂದ ನಿರ್ಮಿಸಲಾಗಿರುವ 9ನೇ ಗೃಹ ಶ್ರೀ ವರಲಕ್ಷ್ಮೀ ನಿಲಯ ಬೈಂದೂರಿನ ಗಂಗಾನಾಡು-ನೀರೋಡಿಯಲ್ಲಿಸೆ.26 ರಂದು ಉದ್ಘಾಟನೆಗೊಂಡಿತು.
ನಿಪ್ಪಾಣಿ ಸಧರ್ಮ ಓಂಶಕ್ತಿ ಮಠದ ಪೀಠಾಧಿಪತಿ ಶ್ರೀ ಅರುಣಾನಂದ ಸ್ವಾಮೀಜಿ ನೂತನ ಗೃಹವನ್ನು ಉದ್ಘಾಟಿಸಿ ಆಶೀರ್ವದಿಸಿದರು. ಬಡವರ ಬಾಳಿನ ಆಶಾಕಿರಣದಂತಿರುವ ಡಾ.ಗೋವಿಂದ ಬಾಬು ಪೂಜಾರಿಯವರು ತನ್ನ ಸಂಪಾದನೆ ಒಂದು ಭಾಗವನ್ನು ಈ ಭಾಗದ ಬಡವರ ಕಲ್ಯಾಣಕ್ಕಾಗಿ ವಿನಿಯೋಗಿಸುತ್ತಿರುವುದು ದೇವರು ಮೆಚ್ಚುವಂತದ್ದು, ಡಾ.ಗೋವಿಂದ ಬಾಬು ಪೂಜಾರಿಯವರು ತಮ್ಮ ಸತ್ಕಾರ್ಯಗಳ ಮೂಲಕ ಸಂತ್ರಪ್ತಿ ಪಡೆಯುತ್ತಿರುವುದು ಶ್ಲಾಘನೀಯ ಎಂದು ಸ್ವಾಮಿಜಿ ಹೇಳಿದರು.
ನೂತನ ಗೃಹದ ಕೀಲಿಕೈಯನ್ನು ಫಲಾನುಭವಿ ಸೌಂತ್ಮನೆ ರಾಮ ಮರಾಠಿ ದಂಪತಿಗೆ ಹಸ್ತಾಂತರಿಸಿ ಮಾತನಾಡಿದ ಡಾ. ಗೋವಿಂದ ಬಾಬು ಪೂಜಾರಿ ಟ್ರಸ್ಟ್ ಮೂಲಕ ನಿರ್ಮಿಸಲಾಗಿರುವ ಒಂಭತ್ತನೇ ಮನೆ ಇದಾಗಿದ್ದು, ನಮ್ಮ ಟ್ರಸ್ಟ್ ಮೂಲಕ ನಿರಂತರವಾಗಿ ಸೇವಾ ಕಾರ್ಯಗಳನ್ನು ಮಾಡುತ್ತಾ ಬರಲಾಗುತ್ತಿದೆ,.ಮುಂದಿನ ದಿನಗಳಲ್ಲಿ ಟ್ರಸ್ಟ್ ವತಿಯಿಂದ ಹಲವು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ ನಾರಾಯಣ ವಿಠಲ ಗುರೂಜಿ, ಆರ್ಎಸ್ಎಸ್ನ ಹಿರಿಯ ಸ್ವಯಂಸೇವಕ ಅಚ್ಚುತ ಕಲ್ಮಾಡಿ, ವಣಕೊಡ್ಲು ದೇವಳದ ಅನುವಂಶಿಕ ಧರ್ಮದರ್ಶಿ ಡಾ. ರಾಜಮೋಹನ್ ಶೆಟ್ಟಿ, ಛತ್ರಪತಿ ಶಿವಾಜಿ ಯುವಸೇನೆ ಅಧ್ಯಕ್ಷ ಮಹಾಲಿಂಗ ನಾಯ್ಕ್, ನೀರೋಡಿ ಗುರಿಕಾರ ನಾರಾಯಣ ಮರಾಠಿ, ಬಾಬು ಪೂಜಾರಿ ಮತ್ತು ಮಂಜಮ್ಮ ದಂಪತಿಗಳು, ಮಾಲತಿ ಗೋವಿಂದ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಛತ್ರಪತಿ ಶಿವಾಜಿ ಯುವಸೇನೆ ವತಿಯಿಂದ ಡಾ. ಗೋವಿಂದ ಬಾಬು ಪೂಜಾರಿಯವರನ್ನು ಸನ್ಮಾನಿಸಲಾಯಿತು. ನಾಗರಾಜ ಪಿ. ಯಡ್ತರೆ ಕಾರ್ಯಕ್ರಮ ನಿರೂಪಿಸಿದರು.