ಹೆಮ್ಮಾಡಿ(ಸೆ.21): ಜನತಾ ಪದವಿಪೂರ್ವ ಕಾಲೇಜಿನಲ್ಲಿ ಜಲಜಾಗ್ರತಿ ಕಾರ್ಯಕ್ರಮ ರೋಟರಿ ಕ್ಲಬ್ ಗಂಗೊಳ್ಳಿ ಆಯೋಜನೆಯಲ್ಲಿ ಹಮ್ಮಿಕೊಳ್ಳಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಗಂಗೊಳ್ಳಿ ಅಧ್ಯಕ್ಷೆ ಚಂದ್ರಕಲಾ ಎಸ್.ತಾಂಡೇಲ್ ವಹಿಸಿದ್ದರು.ರೋಟರಿ ಜಿಲ್ಲಾ ಗವರ್ನರ್ ಶ್ರೀ ಸಿ.ಎ.ದೇವಾನಂದ್ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ನೆಲ-ಜಲ-ಪರಿಸರ ಜಿಲ್ಲಾ ಸಂಯೋಜಕರಾದ ಶಿವಾನಂದರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ರಮೇಶ ಪೂಜಾರಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಜ್ಯ ಸಂಪನ್ಮೂಲ ವ್ಯಕ್ತಿ ಶ್ರೀ ರತ್ನ ಶ್ರೀ ಜೋಸೆಫ್ ಜಿ.ಎಮ್ ರೆಬೆಲ್ಲೊ ರವರು ಮಾತನಾಡಿ ಜಲಜಾಗ್ರತಿಯ ಕುರಿತಾಗಿ ಅರಿವು ಮೂಡಿಸಿದರು.ಮಳೆಕೊಯ್ಲು,ಜಲ ಮರುಪೂರಣ,ಜಲಕ್ಷಾಮ,ದ್ರವ ತ್ಯಾಜ್ಯ ಈ ಪ್ರಮುಖ ವಿಚಾರಗಳ ಕುರಿತು ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಬೋಧಕ/ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಶ್ರೀಮತಿ ರಂಜಿತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.