ತಲ್ಲೂರು(ಅ.04): ಸ್ವರಾಜ್ಯ 75 ಸಂಘಟನೆಯ ಆಶ್ರಯದಲ್ಲಿ ಹಮ್ಮಿಕೊಂಡಿರುವ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅಳವಡಿಕೆ ಅಭಿಯಾನದ ಅಂಗವಾಗಿ ಅಕ್ಟೋಬರ್ 2 ರಂದು ಕುಂದಾಪುರ ತಾಲೂಕು ಸ್ವಾತಂತ್ರ್ಯ ಹೋರಾಟಗಾರರಾಗಿರುವ ಎಸ್.ಎನ್. ಸುಬ್ಬಣ್ಣ ಗುಪ್ತ ಇವರ ಮನೆಗೆ ನಾಮ ಫಲಕ ಅಳವಡಿಸಲಾಯಿತು.
” ಸ್ವರಾಜ್ಯ 75 ರ ” 18 ನೇ ಮನೆ ಯಲ್ಲಿ ವಿಶ್ವ ದಾಖಲೆಯ ಯೋಗ ಪಟು ಶ್ರೀ ನಿರಂಜನ್ ಶೆಟ್ಟಿ ತಲ್ಲೂರು ಇವರಿಂದ ನಾಮ ಫಲಕ ಅನಾವರಣ ನೆರವೇರಿಸಿದರು. ರಾಷ್ಟ್ರ ಧ್ವಜಕ್ಕೆ ಪುಷ್ಪಾರ್ಚನೆಯ ಮೂಲಕ ಶ್ರೀಮತಿ ಭೀಮವ್ವ ಚಾಲನೆ ನೀಡಿದರು.ಕಾಯ೯ಕ್ರಮದಲ್ಲಿ ಡಾ.ಬಿ.ಬಿ.ಹೆಗ್ಡೆ ಪ್ರಧಮ ದಜೆ೯ ಕಾಲೇಜಿನ ಉಪ ಪ್ರಾಂಶುಪಾಲರು ಹಾಗೂ ಎನ್.ಎಸ್.ಎಸ್ ಘಟಕ ಕಾರ್ಯಕ್ರಮ ಅಧಿಕಾರಿ ಶ್ರೀ ಚೇತನ್ ಶೆಟ್ಟಿ ಕೋವಾಡಿ , ಸಹ ಕಾರ್ಯಕ್ರಮ ಅಧಿಕಾರಿ ದೀಪ ಪೂಜಾರಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಘಟಕದ ಶ್ರೀ ದಿನಕರ್ ಆರ್ ಶೆಟ್ಟಿ, , ಹಸ್ತ ಚಿತ್ತ ಫೌಂಡೇಶನ್ ನ ರಿ)ವಕ್ವಾಡಿ , ಶ್ರೀಮತಿ ಅಕ್ಷತಾ ಗಿರೀಶ್ ಐತಾಳ್ ಶ್ರೀ ಅರುಣ್ ಕುಮಾರ್ ಶೆಟ್ಟಿ (ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಗ) ಮುಖ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ನರೇಂದ್ರ ಎಸ್ ಗಂಗೊಳ್ಳಿ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿಗರ ಕೊಡುಗೆ ವಿಚಾರದ ಬಗ್ಗೆ ಹಂಚಿಕೊಂಡರು.ಅಧ್ಯಕ್ಷತೆಯನ್ನು ಶ್ರೀ ಗಿರೀಶ್ ಎಸ್.ನಾಯ್ಕ ಇವರು ವಹಿಸಿದ್ದರು.
ಸ್ವರಾಜ್ಯ75 ಸಂಘಟನೆಯ ನೇತ್ರತ್ವದಲ್ಲಿ ,ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು,ಉಸಿರು ಕೋಟ,ಹಸ್ತ ಚಿತ್ತ ಫೌಂಡೇಶನ್,ಎನ್.ಎಸ್.ಎಸ್. ಘಟಕ ಡಾ.ಬಿ.ಬಿ.ಹೆಗ್ಡೆ ಪ್ರಥಮ ದಜೆ೯ ಕಾಲೇಜು ಕುಂದಾಪುರ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಘಟಕ, ಕುಟುಂಬಸ್ಥರು ಗ್ರಾಮಸ್ಥರ ಸಹಕಾರದಿಂದ ಕಾಯ೯ಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ , ಸ್ವಾತಂತ್ರ್ಯ ಹೋರಾಟಗಾರರ ಶ್ರೀ ಧೀರಜ್ ಶೆಟ್ಟಿ ,ದೀಪಾ ಪೂಜಾರಿ ಆಲೂರು,ಶ್ರೀ ಅರುಣ್ ಕುಮಾರ್ ಹೆಚ್.ಆರ್, ಡಾ.ರಮೇಶ್ ಆಚಾಯ೯ ಮತ್ತಿತ್ತರ ಗಣ್ಯರು ಉಪಸ್ಧಿತರಿದ್ದರು.
ಸ್ವರಾಜ್ಯ75 ರ ಕಾಯ೯ಕ್ರಮ ಸಂಚಾಲಕರಾಗಿರುವ ಶ್ರೀ ಪ್ರದೀಪ ಕುಮಾರ್ ಬಸ್ರೂರು ಪ್ರಾಸ್ತಾವಿಕ ಮಾತು ಗಳನ್ನಾಡಿದರು . ಶ್ರೀ ಪ್ರಮೋದ್ ಶಂಕರನಾರಾಯಣ ನಿರೂಪಿಸಿದರು.