ವಂಡ್ಸೆ(ಅ,19); ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರದಗಳಲ್ಲಿ ಒಂದಾದ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದ ಆಡಳಿತ ಮಂಡಳಿಯ ವತಿಯಿಂದ ಉಪ್ಪಿನ ಕುದ್ರು ಗೊಂಬೆಯಾಟ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಭಾಸ್ಕರ ಕೊಗ್ಗ ಕಾಮತ್ ಹಾಗೂ ಸಮಾಜ ಸೇವಕ ರಾಘವೇಂದ್ರ ನೆಂಪು ರವರ ಕೋರಿಕೆಯ ಮೇರೆಗೆ ಅಂದಾಜು 40 ಸಾವಿರ ರೂಪಾಯಿ ಮೌಲ್ಯದ ಬಿಸಿಯೂಟದ ಪ್ಲೇಟ್ ಮತ್ತು ಲೋಟವನ್ನು ನೆಂಪುವಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದ್ದಾರೆ.
ಕ್ಷೇತ್ರದಿಂದ ಕೊಡುಗೆಯಾಗಿ ನೀಡಿದ ಬಿಸಿಯೂಟದ ಪ್ಲೇಟ್ ಮತ್ತು ಲೋಟವನ್ನು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ, ರಾಘವೇಂದ್ರ ನೆಂಪು, ಶಾಲೆಯ ಮುಖ್ಯೋಪಾಧ್ಯಾಯರು ಕುಪ್ಪಯ್ಯ ಮರಾಠಿ ಹಾಗೂ ಶಾಲಾಭಿವೃದ್ಧಿ ಸಮಿತಿ ಹಾಗೂ ಸಿಬ್ಬಂದಿ ವರ್ಗದವರು ಮಕ್ಕಳಿಗೆ ವಿತರಿಸಿದರು.