ಕುಂದಾಪುರ ( ನ,3): ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್,ಎಮ್ ಆಂಗ್ಲ ಮಾಧ್ಯಮ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಗ್ರ್ಯಾಂಡ್ ಪೇರೆಂಟ್ಸ್ ಡೇ ಆಚರಿಸುವ ಮೂಲಕ ಮಕ್ಕಳಿಗೆ ಕುಟುಂಬದ ಹಿರಿಯರ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲಾಯಿತು.
ಸಂಸ್ಥೆಯ ಪ್ರಾಂಶುಪಾಲರಾಗಿರುವ ಡಾ.ಚಿಂತನಾ ರಾಜೇಶ್ ಕಾರ್ಯಕ್ರಮದ ಆಶಯದ ಕುರಿತು ಮಾತನಾಡಿದರು. ಮುಖ್ಯ ಶಿಕ್ಷಕಿ ಲತಾ. ಜಿ. ಭಟ್ ಅತಿಥಿಗಳ ಪರಿಚಯ ಮಾಡಿದರು. ಮುಖ್ಯ ಅತಿಥಿ ಡಾ. ಪಾರ್ವತಿ ಜಿ. ಐತಾಳ್ ಮೊಮ್ಮಕ್ಕಳ ಜೀವನದಲ್ಲಿ ಅಜ್ಜಿ ಅಜ್ಜಂದಿರ ಮಹತ್ವದ ಕುರಿತು ಮಾತನಾಡಿದರು. ನೆರೆದಿರುವ ಅಜ್ಜ ಅಜ್ಜಿಯರ ಸಮ್ಮುಖದಲ್ಲಿ ಮಕ್ಕಳ ಮನರಂಜನಾ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರಾದ ಶುಭಾ ಕೆ.ಎನ್, ಜಗದೀಶ್ ಆಚಾರ್, ವಿಲ್ಮಾ.ಡಿ.ಸಿಲ್ವ, ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಸಂಯೋಜಕ ಶಿಕ್ಷಕಿ ಆರತಿ ಶೆಟ್ಟಿ ನಿರೂಪಿಸಿ ವಂದಿಸಿದರು.