ಕೋಟೇಶ್ವರ (ನ,15): ಇಲ್ಲಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಕ್ರೀಡಾಕೂಟದ ಜೊತೆಗೆ ಮಕ್ಕಳ ದಿನಾಚರಣೆಯನ್ನು ನ.14 ರಂದು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕೋಟೇಶ್ವರದ ಹೆಸರಾಂತ ವೈದ್ಯರಾದ ಡಾ. ಶ್ರೀಪಾದ್ ಹೆಗ್ಡೆ ಯವರು ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಿಸಿದರು. ನಿವೃತ್ತ ಮೆಸ್ಕಾಂ ಅಧಿಕಾರಿ ಬಾಬಣ್ಣ ಪೂಜಾರಿ ಕಾರ್ಯಕ್ರಮ ಉದ್ದೇಶಿಸಿ ಮಾತಾನಾಡಿ ಮಕ್ಕಳು ಉತ್ತಮ ವಿದ್ಯಾಭ್ಯಾಸದ ಜೊತೆಗೆ ಉತ್ತಮ ಸಂಸ್ಕಾರ ಪಡೆಯುವುದರ ಮೂಲಕ ನಮ್ಮೂರಿಗೆ ಕೀರ್ತಿ ತರುವುದರ ಜೊತೆಗೆ ಇಡೀ ದೇಶದ ಆಸ್ತಿಯಾಗಬೇಕು, ಲಕ್ಷಾಂತರ ಜನಕ್ಕೆ ಪ್ರೇರಣೆಯಾಗಬೇಕೆಂದರು.
ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ವಿಜೇತ ಮಕ್ಕಳಿಗೆ ಬಹುಮಾನವನ್ನ ಹಸ್ತಾಂತರಿಸಿದ್ದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಶೆಟ್ಟಿ, ಗೋಪಾಡಿ ಪಂಚಾಯತ್ ಅಧ್ಯಕ್ಷೆ ಸರೋಜ ಪೂಜಾರಿ, ಸದಸ್ಯ ಪ್ರಕಾಶ್ ಕಾಂಚನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಂದ್ರ ಕಾಂಚನ್, ಉಪಾಧ್ಯಕ್ಷರಾದ ಸುಬ್ಬಣ್ಣ, ಶಾಲಾ ಶಿಕ್ಷಕಿ ಮಾಲತಿ ನಾಯ್ಕ್, ಕಂಪ್ಯೂಟರ್ ಸಹ ಶಿಕ್ಷಕಿ ಕವಿತಾ, ಅಂಗನವಾಡಿಯ ಸಹಾಯಕಿ ಜಯಂತಿ, ಸಹ ಸಹಾಯಕಿ ಸವಿತಾ ಮತ್ತು ಪೋಷಕರು ಉಪಸ್ಥಿತರಿದ್ದರು..
ವರದಿ ಸುರೇಂದ್ರ ಕಾಂಚನ್ ಸಂಗಮ್