ಕುಂದಾಪುರ (ನ,17): ಜೇಸಿಐ ಕುಂದಾಪುರ ಇದರ ಜೇಸಿ ಸಪ್ತಾಹ 2022 ರ ವೈವಿಧ್ಯಮಯ ಯಕ್ಷಗಾನ ಕಲಾಪ್ರಕಾರಗಳನ್ನೊಳಗೊಂಡ ‘ಒಡ್ಡೋಲಗ ಯಕ್ಷರಾಧನೆ’ ಎಂಬ ಶೀರ್ಷಿಕೆಯಡಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಯಕ್ಷಗಾನ ಭಾಗವತಿಕೆ ಸ್ಪರ್ಧೆಯಲ್ಲಿ ಪ್ರಥಮ ಬಿಸಿಎ ‘ಎ’ ವಿಭಾಗದ ಪೂಜಾ ಆಚಾರ್ ತೆಕ್ಕಟ್ಟೆ ಪ್ರಥಮ ಸ್ಥಾನ ಮತ್ತು ಯಕ್ಷಗಾನ ಚಂಡೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಯಕ್ಷಗಾನ ನಾಟ್ಯ ಸ್ಪರ್ಧೆಯಲ್ಲಿ ತೃತೀಯ ಬಿ.ಕಾಂ. ‘ಡಿ’ ವಿಭಾಗದ ಶ್ರೀನಿಧಿ ಖಾರ್ವಿ ಪ್ರಥಮ ಸ್ಥಾನ, ಯಕ್ಷಗಾನ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ಬಿ.ಕಾಂ. ‘ಬಿ’ ವಿಭಾಗದ ಮನೀಷ್ ಕುಮಾರ್ ಪ್ರಥಮ ಸ್ಥಾನ, ದ್ವಿತೀಯ ಬಿಸಿಎ ಸೀಮಾ ದ್ವಿತೀಯ ಸ್ಥಾನ, ದ್ವಿತೀಯ ಬಿ.ಎಸ್ಸಿ. ವಿಭಾಗದ ಕೃಷ್ಣ ತೃತೀಯ ಸ್ಥಾನ, ಯಕ್ಷಗಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಬಿಸಿಎ ವಿಭಾಗದ ಸಾಕೇತ್ ಹೆಗಡೆ ಪ್ರಥಮ ಸ್ಥಾನ ಹಾಗೂ ದ್ವಿತೀಯ ಬಿಸಿಎ ಋತಿಕಾ & ದ್ವಿತೀಯ ಬಿ.ಕಾಂ. ‘ಬಿ’ ವಿಭಾಗದ ಭರತ್ ಶೆಟ್ಟಿಗಾರ್ ಸಮಾಧಾನಕರ ಬಹುಮಾನಗಳನ್ನು ಪಡೆದಿರುತ್ತಾರೆ. ಸ್ಪರ್ಧೆಯಲ್ಲಿ ಕುಂಕುಮ, ಅಂಕಿತಾ, ಶ್ವೇತಾ, ಶಾಂತಿ, ಮಂಜುಳಾ, ವಿನೋದ್ರಾಜ್, ಮದನ್, ಸ್ವಸ್ತಿಕ್ ದೇವಾಡಿಗ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ.
ವಿಜೇತರಿಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಬೈoದೂರಿನ ಶಾಸಕರಾದ ಬಿ. ಎಂ ಸುಕುಮಾರ ಶೆಟ್ಟಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ,ಪ್ರಾಂಶುಪಾಲರಾದ ಪ್ರೊ| ಕೆ. ಕೊತ್ತಾಡಿ ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಕಾರ್ಯಕ್ರಮ ಸಂಯೋಜಕಿ ಸುಶ್ಮಿತಾ ಸಾಲಿಗ್ರಾಮ ಹಾಗೂ ಭೋಧಕ & ಭೋಧಕೇತರ ವ್ರoದದವರು ಅಭಿನಂದನೆ ಸಲ್ಲಿಸಿದ್ದಾರೆ.