ಕುಂದಾಪುರ( ನ,21): ಮಹಾರಾಷ್ಟ್ರ ಲಾತೂರು ಜಿಲ್ಲೆಯ ತುಳ್ಜಾಪುರ್ ನಲ್ಲಿ ನೆಡೆದ ಅಂತರ್ ಜಿಲ್ಲೆ ಲಾಠಿ ತಿರುಗಿಸುವ ಸ್ಪರ್ಧೆಯಲ್ಲಿ 22 ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು,ಅದರಲ್ಲಿ ಉಡುಪಿಯ ಬೈಂದೂರು ಮೂಲದ ಯಶ್ ರಾಜ್ ಚಂದನ್ ಪ್ರಥಮ ಬಹುಮಾನ ಪಡೆಯುವುದರೊಂದಿಗೆ ಚಿನ್ನದ ಪದಕ ಪಡೆದಿರುತ್ತಾರೆ.
ಬೈಂದೂರು ಮೂಲದ ನಟರಾಜ್ ಚಂದನ್ ಮತ್ತು ಶಾರದಾ ಚಂದನ್ ಅವರ ಸುಪುತ್ರರಾಗಿರುವ ಯಶ್ ರಾಜ್ ಚಂದನ್ ಮಹಾರಾಷ್ಟ್ರದ ನೀಲಾಂಗದ ವಿ ಡಿ ಡಿ ನೊಬೆಲ್ ಪಬ್ಲಿಕ್ ಸ್ಕೂಲ್ ನಲ್ಲಿ 4 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.