ಮೂಡಬಿದ್ರೆ(ಡಿ,05): ಶ್ರೀ ಧವಲ ಕಾಲೇಜು ಮೂಡಬಿದ್ರೆಯ 2022 -23 ನೇ ಸಾಲಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಕಾರ್ಯಕ್ರಮವು ಡಿ .02ರಂದು ನಡೆಯಿತು. ವಿಧಾನ ಪರಿಷತ್ ನ ಸದಸ್ಯರಾದ ಎಸ್ ಎಲ್ ಭೋಜೆ ಗೌಡ ಸಂಘವನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ಎಳವೆಯಲ್ಲಿಯೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ದ. ಕ ಜಿಲ್ಲಾ ಬಿಜೆಪಿಯ ಅಧ್ಯಕ್ಷರಾದ ಶ್ರೀ ಸುದರ್ಶನ್ ಎಂ ಭಾಗವಹಿಸಿದರು. ಶ್ರೀ ಮೂಡಬಿದ್ರೆ ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾದ ಶ್ರೀ ಅಭಿಜಿತ್ ಎಂ ಮತ್ತು ಸಂಚಾಲಕರಾದ ಶ್ರೀ ಕೆ ಹೇಮರಾಜ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಹಾವೀರ ಅಜ್ರಿ ಎಸ್ ವಹಿಸಿಕೊಂಡಿದ್ದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಯೋಜಕರಾದ ಶ್ರೀ ರಾಹುಲ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀ ನಿಕಿತ್ ಸ್ವಾಗತಿಸಿ ಕಾರ್ಯದರ್ಶಿಯಾದ ಶ್ರೀ ರಂಜಿತ್ ಬಲ್ಲಾಳ್ ವಂದಿಸಿದರು. ಜೊತೆ ಕಾರ್ಯದರ್ಶಿ ಕುಮಾರಿ ತನುವಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾದ ಶ್ರೀ ಭರತೇಶ್ ಜೈನ್ ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದು ಪ್ರಮಾಣವಚನ ಸ್ವೀಕರಿಸಿದರು.