ಬ್ರಹ್ಮಾವರ(ಜೂ,29): ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಯ್ಕಾಡಿಯಲ್ಲಿ ಜೆಸಿಐ ಬ್ರಹ್ಮಾವರ ಸೇವಾಮೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಇಶಾ ಫೌಂಡೇಶನ್ ಸಂಸ್ಥೆಯ ಸಹಕಾರದಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು.
ವಿಶ್ವ ಯೋಗ ದಿನಾಚರಣೆಯ ಮಹತ್ವ,ಯೋಗದಿಂದಾಗುವ ಪ್ರಯೋಜನ, ಯೋಗದ ಅರಿವು ಮತ್ತು ಪ್ರಸ್ತುತ ಸಮಯದಲ್ಲಿ ಯೋಗದ ಅವಶ್ಯಕತೆ ಮತ್ತು ಪ್ರಾತ್ಯಕ್ಷಿಕೆ ಯನ್ನು ಶಾಲಾ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ 340 ಜನ ಕಾರ್ಯಗಾರದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಜೆಸಿಐ ಬ್ರಹ್ಮಾವರ ಸೇವಾಮೆ ಅಧ್ಯಕ್ಷರಾದ ಜೆಸಿ ಕೃಷ್ಣಮೂರ್ತಿ ಹೈಕಾಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೈಕಾಡಿ ಇದರ ಮುಖ್ಯೋಪಾದ್ಯಾಯರಾದ ಶ್ರೀ ರವಿರಾಜ್ ಶೆಟ್ಟಿ, ಇಶಾ ಫೌಂಡೇಶನ್ ಕಾರ್ಯಕರ್ತರಾದ ಶ್ರೀ. ಸಭ್ಯತ್ ಶೆಟ್ಟಿ ಮತ್ತು ಶ್ರೀ ವೆಂಕಟೇಶ್ ಬಿ ಎನ್ ,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಸೂಯ ಪ್ರಕಾಶ್ ದಾಮ್ಲೆ, ಉಪಾಧ್ಯಕ್ಷರಾದ ಶ್ರೀ ದಿನಕರ ಶೆಟ್ಟಿ , ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಜ್ಯೋತಿ ಮೇಡಂ, ಎಸ್ ಡಿ ಎಂ ಸಿ ಸಮನ್ವಯ ಸಮಿತಿ ಉಡುಪಿ ಜಿಲ್ಲಾ ಸಹ ಕಾರ್ಯದರ್ಶಿಯಾದ ಶ್ರೀಮತಿ ಕೃಪಾ ಹೆಬ್ಬಾರ್ , ಕಾರ್ಯಕ್ರಮ ಯೋಜನಾಧಿಕಾರಿಯಾಗಿ ಸರಕಾರಿ ಪ್ರೌಢ ಶಾಲಾ ಆಂಗ್ಲಭಾಷಾ ಶಿಕ್ಷಕಿ ಜೆಸಿ ಸುಪ್ರಿತಾ ಶೆಟ್ಟಿ ,ಜೆಸಿ ಜಯಂತಿ ಹೈಕಾಡಿ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಲ್ಲಾ ಶಿಕ್ಷಕ ವೃಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೈಕಾಡಿ ಇಲ್ಲಿ ಸುಮಾರು 318 ವಿದ್ಯಾರ್ಥಿಗಳಿದ್ದು ಉತ್ತಮ ಗಣಮಟ್ಟದ ಶಿಕ್ಷಣ, ಪಠ್ಯ ಮತ್ತು ಸಹ ಪಠ್ಯ ಚಟುವಟಿಕೆಯಲ್ಲಿ ಉತ್ತಮ ಸಾಧನೆ ನೀಡುತ್ತಿದ್ದು ಅತ್ಯುತ್ತಮ ಗುಣಮಟ್ಟದ ಶಿಕ್ಷಕ ಬಳಗವನ್ನು ಹೊಂದಿದೆ. ಸಂಸ್ಥೆಯು ಸ್ವಂತ ಬಸ್ಸಿನ ವ್ಯವಸ್ಥೆ ಹೊಂದಿದ್ದು ಸುತ್ತ ಮುತ್ತಲ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಜೆಸಿಐ ಬ್ರಹ್ಮಾವರ ಸೇವಾಮೆ ಸಂಸ್ಥೆಯು ಈ ಶಾಲೆಗೆ ಉತ್ತಮ ತರಬೇತುದಾರರಿಂದ ಉ ತ್ತಮ ತರಬೇತಿ ನೀಡುತ್ತಾ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಾಯವಾಗಲಿದೆ.