ಕುಂದಾಪುರ(ಸೆ.10) : ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ಸೆಪ್ಟೆಂಬರ್ 5 ರ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸುದೀರ್ಘ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಂಪಾರು ಗ್ರಾಮದ ನಿವೃತ್ತಮುಖ್ಯ ಶಿಕ್ಷಕರಾದ ಶ್ರೀ ಎಚ್. ಬಿ . ಬಾಬಯ್ಯ ಶೆಟ್ಟಿಯವರನ್ನು ಕುಂದಾಪುರದ ಜೆ .ಕೆ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ ಪ್ರಯುಕ್ತ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಅಧ್ಯಕ್ಷದಾದ ಲ. ವಸಂತರಾಜ್ ಶೆಟ್ಟಿ ಸನ್ಮಾನಿಸಿ ಗೌರವಿಸಿದರು.
ಡಾ. ಬಿ .ಬಿ ಹೆಗ್ಡೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಶ್ರೀ ಚೇತನ್ ಶೆಟ್ಟಿ ಕೋವಾಡಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಗುರುವಿನ ಸ್ಥಾನ ಮಹತ್ತರವಾದದ್ದು. ಉತ್ತಮ ಸಮಾಜ ನಿರ್ಮಾಣ ಮತ್ತು ಬದುಕಿನ ಮೌಲ್ಯಗಳನ್ನು ಸಾಗರಪಡಿಸುವ ಶಿಕ್ಷಕರ ವೃತ್ತಿ ಪರಮ ಶ್ರೇಷ್ಠವಾದದ್ದು ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅಂಪಾರು ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.
ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಲ .ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಕೋಶಧಿಕಾರಿ ಸುಕುಮಾರ್ ಶೆಟ್ಟಿ ಹೇರಿಕುದ್ರು, ನಿಕಟ ಪೂರ್ವ ಅಧ್ಯಕ್ಷರಾದ ಲ.ಸತೀಶ್ ಶೆಟ್ಟಿ ಕಂದಾವರ, ಲ. ಜಯಶೀಲ ಶೆಟ್ಟಿ ಕಂದಾವರ, ಲ.ಡಾ.ಅಂಪಾರು ನಿತ್ಯಾನಂದ ಶೆಟ್ಟಿ, ಲ. ನಾರಾಯಣ ಶೆಟ್ಟಿ ಸಿದ್ದಾಪುರ,ಲ .ಅರುಣ್ ಕುಮಾರ್ ಶೆಟ್ಟಿ, ಲ .ಗಿರೀಶ್ ಮೇಸ್ತ, ಲ .ಪ್ರಶಾಂತ್ ಶೆಟ್ಟಿ, ಲ . ರಾಜೇಶ್ ಶೆಟ್ಟಿ, ಲ.ಟಿ.ಎನ್ ರಘುರಾಮ್ ಶೆಟ್ಟಿ, ಲ .ನಾರಾಯಣ ಶೆಟ್ಟಿ ಸಿದ್ದಾಪುರ, ಲ .ಅಶೋಕ್ ಶೆಟ್ಟಿ ಸಂಸಾಡಿ, ಲ . ಅರುಣ್ ಕುಮಾರ್ ಶೆಟ್ಟಿ ಅಂಪಾರು, ಲ.ಮೊಹಮದ್ ಆಶ್ರಫ್ ಉಪಸ್ಥಿತರಿದ್ದರು. ಲ .ವೆಂಕಟರಮಣ ನಾಯಕ್ ಸ್ವಾಗತಿಸಿ, ಲ. ಉದಯ್ ಕುಮಾರ್ ಧನ್ಯವಾದಗೈದರು.