ಗಂಗೊಳ್ಳಿ ( ನ,21): ವಿದ್ಯಾರ್ಥಿಗಳಲ್ಲಿ ಭಾವೈಕ್ಯತೆ ಮತ್ತು ಸಾಮಾಜಿಕ ಕಳಕಳಿ ಉಂಟು ಮಾಡುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಾ ಇಂತಹ ಯೋಜನೆಗಳು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ವಂಡ್ಸೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲಕರಾದ ರಾಜೀವ್ ನಾಯ್ಕ್ ಅಭಿಪ್ರಾಯಪಟ್ಟರು.
ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕೊಲ್ಲೂರಿನ ಧರ್ಮಪೀಠದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಕವಿತಾ ಎಂ ಸಿ ರವರು ವಹಿಸಿದ್ದರು.
ಅತಿಥಿಗಳಾದ ಶ್ರೀ ಸಮುದ್ಗದ ಸ್ವಾಮೀಜಿ ಮತ್ತು ನಾಗೇಂದ್ರ ಪೈ ಹಾಗೂ ಜಿ ಎಸ್ ವಿ ಎಸ್ ಅಸೋಸಿಯೇಷನ್ನಿನ ಸದಸ್ಯರಾದ ಕೆ ರಾಮನಾಥ್ ನಾಯಕ್ ರವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಇಂತಹ ಶಿಬಿರಗಳು ವ್ಯಕ್ತಿತ್ವ ವಿಕಾಸನಕ್ಕೆ ಹಾಗೂ ಭ್ರಾತತ್ವ ಬೆಳವಣಿಗೆಗೆ ಪೂರಕ ಎಂದರು ಬೈಂದೂರು ವಲಯದ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಜಗದೀಶ್ ರವರು ರಾಷ್ಟ್ರೀಯ ಸೇವ ಯೋಜನೆಯಲ್ಲಿ ಕಾಲೇಜಿನ ನೆನಪುಗಳನ್ನು ಮೆಲಕು ಹಾಕಿದರು.
ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಅಭಿಯಂತರಾಗಿರುವ ಪ್ರದೀಪ್ ಡಿಕೆ ರವರು ಕೊಲ್ಲೂರು ಪರಿಸರ ಸ್ವಚ್ಛಗೊಳಿಸಿದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು ನಮ್ಮ ಶಿಬಿರದ ನೇತೃತ್ವವನ್ನು ವಹಿಸಿದ ಡಾಕ್ಟರ್ ಶ್ರೀಕಾಂತ್ ರವರು ಶಿಬಿರಾರ್ಥಿಗಳು ಇಂತಹ ಶಿಬಿರಗಳನ್ನು ಹೆಚ್ಚು ಕ್ರಿಯಾಶೀಲರಾಗಿ ಇರುತ್ತಾರೆ ಮತ್ತು ಸಮಾಜದ ಆಗುಹೋಗುಗಳ ಬಗ್ಗೆ ಹಾಗೂ ಕುಂದು ಕೊರತೆಗಳನ್ನು ನಿಭಾಯಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸಬೇಕು ಎಂದರು.
ಧರ್ಮಪೀಠದ ವಿವಸ್ವಾನ್ ಸ್ವಾಮೀಜಿ ಶಿಬಿರಾರ್ಥಿಗಳಿಗೆ ಆಶೀರ್ವದಿಸುತ್ತಾ ಈ ಪರಿಸರಕ್ಕೆ ಬಂದು ನೀವು ಸೇವೆಯನ್ನು ಸಲ್ಲಿಸಿದ್ದೀರಿ ಇನ್ನು ಮುಂದೆಯೂ ಸೇವಾ ಕಾರ್ಯಕ್ರಮವು ಮುಂದುವರೆಯಲಿ ಎಂದರು. ಶಿಬಿರಾರ್ಥಿಗಳಾದ ಸಹನಾ, ಅರ್ಚನಾ, ದೀಕ್ಷಾ, ವೆಲಿಟಾ, ಶ್ರೇಯಾ, ಪ್ರೀತಮ್, ರಕ್ಷಿತಾ, ಅಬ್ರಾರ್,ಶ್ರೇಯಾ ಪೂಜಾರಿ, ಶ್ರೇಯಲ್, ದಿವ್ಯಾ ಶಿಬಿರದ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಸ್ವಾಗತವನ್ನು ವೆಂಕಟೇಶ್ ಮೂರ್ತಿರವರು ನಡೆಸಿಕೊಟ್ಟರು. ಕಾರ್ಯಕ್ರಮ ಅಧಿಕಾರಿ ಸುಗುಣ ಆರ್ ಕೆ ವಂದಿಸಿದರು ಅತಿಥಿಗಳ ಪರಿಚಯವನ್ನು ದೀಪ್ತಿ ಶೆಣೈ ಕಾರ್ಯಕ್ರಮದ ನಿರೂಪಣೆಯನ್ನು ರಕ್ಷಿತರವರು ನಡೆಸಿಕೊಟ್ಟರು.