ಕುಂದಾಪುರ ( ಜ.12): ರಾಜ್ಯದ ಪ್ರಸಿದ್ದ ಸುಗಮ ಸಂಗೀತ ಗಾಯಕ ಹಾಗೂ ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಗಂಗೊಳ್ಳಿ ಯವರ ಸಂಘಟನೆ ಹಾಗೂ ಕನ್ನಡ ನಾಡು ನುಡಿ ಸುಗಮ ಸಂಗೀತದಲ್ಲಿ ಅಪಾರ ಮತ್ತು ಅನುಪಮ ಸಾಧನೆಯನ್ನು ಗುರುತಿಸಿ, “”ಖಿದ್ಮಾ ಸೇವಾರತ್ನ”” ರಾಜ್ಯ ಪ್ರಶಸ್ತಿ ಲಭಿಸಿದೆ.
ಖಿದ್ಮಾ ಫೌಂಡೇಶನ್ ಕರ್ನಾಟಕ ಮತ್ತು ವಿಜಯ ಕಾಲೇಜು ಜಯನಗರ, ಬೆಂಗಳೂರು ಇವರ ಸಹಯೋಗದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವ ಪ್ರಯುಕ್ತ ಬೆಂಗಳೂರಿನ ವಿಜಯ ಕಾಲೇಜಿನ ಹಸಿರು ಭವನದಲ್ಲಿ ಜನವರಿ 07 ರಂದು ಆಯೋಜಿಸಲಾಗಿದ್ದ ರಾಜ್ಯಮಟ್ಟದ ಖಿದ್ಮಾ ಕಾವ್ಯಾಮೃತ ಕಾರ್ಯಕ್ರಮ, ಡಾ.ಗಣೇಶ್ ಗಂಗೊಳ್ಳಿಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಜಯ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಿ. ಆರ್, ಅವರು ಹಾಗೂ ಕವಿ ಮತ್ತು ಚಿಂತಕರಾದ ಶ್ರೀ ಯೂಸುಫ್ ಹೆಚ್.ಬಿ, ಮತ್ತು ಶಿಕ್ಷಕಿ ಕವಯತ್ರಿ ಶ್ರೀಮತಿ ಅಶ್ವಿನಿ ಎಸ್ ಅಂಗಡಿ , ಸಾಮಾಜಿಕ ಹೋರಾಟಗಾರ ಡಾ. ಬಿ.ಎನ್ ಸುರೇಶ್ ಬಾಬು, ಖಿದ್ಮಾ ಅಧ್ಯಕ್ಷರಾದ ಶ್ರೀ ಹಾಶಿಂ ಬನ್ನೂರು, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಅಮಿತಾ ಅಶೋಕ್ ಪ್ರಸಾದ್ ಹಾಗೂ ಕಾರ್ಯಕ್ರಮದ ಆಯೋಜಕರು ಹಾಗೂ ರಾಜ್ಯ ಸಂಚಾಲಕರಾದ ಶ್ರೀ ಅಮೀರ್ ಬನ್ನೂರು ಉಪಸ್ಥಿತರಿದ್ದರು.