ಹೆಮ್ಮಾಡಿ(ಜ.30): ಜೆ.ಸಿ. ಐ ಬೈಂದೂರು ಸಿಟಿ ವತಿಯಿಂದ ಯುವ ದಿನಾಚರಣೆ ಪ್ರಯುಕ್ತ ಮೊಗವೀರ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ ಇದರ ಪ್ರತಿಷ್ಠಿತ ಘಟಕವಾದ ಹೆಮ್ಮಾಡಿ ಘಟಕದ ಸೇವಾ ಚಟುವಟಿಕೆಗಳನ್ನು ಗುರುತಿಸಿ ಯುವ ಪ್ರೇರಣಾ ಪ್ರಶಸ್ತಿ ನೀಡಿ ಗುರುತಿಸುವ ಕಾರ್ಯಕ್ರಮವನ್ನು ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಸಭಾಂಗಣದಲ್ಲಿ ಜನವರಿ.30 ರಂದು ಹಮ್ಮಿಕೊಳ್ಳಲಾಯಿತು.
ಜೆ.ಸಿ. ಐ ಬೈಂದೂರು ಸಿಟಿ ಅಧ್ಯಕ್ಷರಾದ ಜೆ.ಸಿ.ಎಚ್.ಜಿ.ಎಫ್ ಅನಿತಾ ಆರ್. ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಹೆಮ್ಮಾಡಿ ಘಟಕದ ಸೇವಾ ಚಟುವಟಿಕೆಯನ್ನು ಶ್ಲಾಘಿಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತಾಡಿದ ಹೆಮ್ಮಾಡಿ ಘಟಕದ ಅಧ್ಯಕ್ಷರಾದ ಲೋಹಿತಾಶ್ವ ಆರ್. ಕುಂದರ್ ಮಾತನಾಡಿ ಜೆಸಿ ಐ ಬೈಂದೂರು ಸಿಟಿ ಅವರ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಬೆಂಬಲಿಸುವ ಭರವಸೆಯೊಂದಿಗೆ ಕೃತಜ್ಞತೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೆ.ಸಿ. ಐ ಬೈಂದೂರು ಸಿಟಿಯ ಪೂರ್ವಾಧ್ಯಕ್ಷರಾದ ಜೆ.ಸಿ.ಎಚ್.ಜಿ.ಎಫ್ ಪ್ರಿಯದರ್ಶಿನಿ ದೇವಾಡಿಗ, ಜೆ.ಸಿ.ಎಚ್.ಜಿ.ಎಫ್
ನರೇಂದ್ರ ಶೇಟ್, ಜೆ.ಸಿ.ಎಚ್.ಜಿ.ಎಫ್ ಸವಿತಾ ದಿನೇಶ್ ಗಣಿಗ, ನಿಕಟಪೂರ್ವ ಕಾರ್ಯದರ್ಶಿ ಜೆ.ಸಿ.ಎಚ್.ಜಿ.ಎಫ್ ಸತೀಶ್ ಎಂ ,ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಕಾರ್ಯದರ್ಶಿ ಪ್ರವೀಣ್ ಮೊಗವೀರ ಗಂಗೊಳ್ಳಿ ,ಘಟಕದ ಉಪಾಧ್ಯಕ್ಷರದ ಸಂತೋಷ್ ತೊಪ್ಲು, ನಿಯೋಜಿತ ಅಧ್ಯಕ್ಷ ದಿನೇಶ್ ಕಾಂಚನ್ ಬಾಳಿಕೆರೆ, ಸ್ತ್ರೀಶಕ್ತಿ ಬಗ್ವಾಡಿ ಅಧ್ಯಕ್ಷರಾದ ಶ್ಯಾಮಲ ಚಂದನ್,ಸಂತೋಷ್ ಸುಳ್ಸೆ ಹಾಗೂ ಘಟಕದ ಸದಸ್ಯರು ಉಪಸ್ಥಿತರಿದ್ದರು.
ಜೆ ಸಿ ಐ ಬೈಂದೂರು ಸಿಟಿ ಇದರ ಸ್ಥಾಪಕ ಅಧ್ಯಕ್ಷರಾದ ಜೆ.ಸಿ.ಎಚ್.ಜಿ.ಎಫ್ ಮಣಿಕಂಠ ಎಸ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.