ಕುಂದಾಪುರ: ಕುಂದಾಪುರ ತಾಲೂಕು ಗೋಪಾಡಿ ಗ್ರಾಮದ ಮಲಸಾವರಿ ಪಂಜುರ್ಲಿ ದೈವಸ್ಥಾನದ ಚೆರ್ಕಿ ಕಡು ಸಮುದ್ರತೀರದಲ್ಲಿ ಫೆಬ್ರುವರಿ 03 ರ ಬುಧವಾರ ರಾತ್ರಿ ಸಮಯದಲ್ಲಿ ಕಡಲಾಮೆ ಮೊಟ್ಟೆ ಪತ್ತೆಯಾಗಿದ್ದು, ಕರಾವಳಿ ಫ್ರೆಂಡ್ಸ್ ನ ಸಂತೋಷ್ ಪೂಜಾರಿ ಹಾಗೂ ಲೋಕೇಶ್ ಪೂಜಾರಿಯವರು ಕಡಲಾಮೆ ಮೊಟ್ಟೆಯನ್ನು ಪತ್ತೆಹಚ್ಚಿದ್ದು, ಇದೀಗ ಸರಿ ಸುಮಾರು 130 ಮೊಟ್ಟೆಗಳನ್ನು ಸಂರಕ್ಷಿಸಲಾಗಿದೆ.
ಕ್ಲೀನ್ ಕುಂದಾಪುರ ಪ್ರೊಜೆಕ್ಟ್ ಹಾಗೂ ಎಫ್.ಎಸ್.ಎಲ್. ಇಂಡಿಯಾದ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಡಿ.ಸಿ.ಎಫ್ ಆಶಿಶ್ ರೆಡ್ಡಿ, ಎ.ಸಿ.ಎಫ್ ಲೋಹಿತ್, ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್, ಉಪ ವಲಯ ಅರಣ್ಯಾಧಿಕಾರಿ ಉದಯ, ಹಸ್ತಾ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಮೊಟ್ಟೆ ಸಂರಕ್ಷಣೆ ಕುರಿತು ಸಲಹೆ ನೀಡಿದರು.
ಕ್ಲೀನ್ ಕುಂದಾಪುರ ಪ್ರೊಜೆಕ್ಟ್ ಹಾಗೂ ಎಫ್.ಎಸ್.ಎಲ್ ಇಂಡಿಯಾ ಸದಸ್ಯರು ಕಡಲ ತೀರದ ಜನರಲ್ಲಿ ನಿರಂತರವಾಗಿ ಸ್ವಚ್ಛತೆ ಮತ್ತು ಕಡಲಾಮೆ ರಕ್ಷಣೆ ಕುರಿತು ಅರಿವು ಮೂಡಿಸುವ ಕಾರ್ಯ ಸ್ಥಳೀಯರಿಂದ ಪ್ರಶಂಸಿಸಲ್ಪಟ್ಟಿದೆ.