ಶಿರ್ವ(ನ,26): ಇಲ್ಲಿನ ಸಂತ ಮೇರಿ ಕಾಲೇಜಿನಲ್ಲಿ ನ,26 ರ ಸಂವಿಧಾನ ದಿನಾಚರಣೆ ಅಂಗವಾಗಿ ಮಾನವ ಹಕ್ಕುಗಳು ಮತ್ತು ಕಾನೂನು ಅರಿವು ಜಾಗ್ರತಿ ಘಟಕ, ಎನ್. ಎಸ್. ಎಸ್ ಘಟಕ, ರೋವರ್ಸ್ ಮತ್ತು ರೆಂಜೆರ್ಸ್ ಘಟಕದ ಸಹಾಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರತಿಜ್ನಾ ವಿಧಿಯನ್ನು ಭೋದಿಸಿ ಅವರಲ್ಲಿ ಮೂಲಭೂತ ಹಕ್ಕುಗಳ ಅರಿವು ಮತ್ತು ಮಹತ್ವವನ್ನು ತಿಳಿದು ಯುವಕರು ಕಾನೂನು ಚೌಕಟ್ಟಿನಲ್ಲಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಅಧ್ಯಕ್ಷ ಸ್ಥಾನವನ್ನು ವಹಿಸಿದ ಡಾ. ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿದರು.
ಸಂವಿಧಾನ ದಿನಾಚರಣೆಯ ಪ್ರಾಮುಖ್ಯತೆ ಹಾಗು ಸಂವಿಧಾನ ಜಾರಿಗೆ ತಂದ ಸಂಧರ್ಭದ ಪ್ರಮುಖ ನಿರ್ಧಾರಗಳು ಮತ್ತು ಅದರ ಕಾರಣಿಕರ್ತರ ಸಾಮಾಜಿಕ ಕೊಡುಗೆಗಳನ್ನು ಪರಿಚಯಿಸಿ ಇಂದಿನ ವಿದ್ಯಾರ್ಥಿಗಳಿಗೆ ಸಂಘ ಸಂಸ್ಥೆಗಳ ಪ್ರಚೋದನೆಗೆ ಒಳಪಟ್ಟು ಯಾವುದೇ ಸಂವಿಧಾನ ವಿರೋಧಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬಾರದೆಂದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರೊ. ಎನ್. ನಿತ್ಯಾನಂದ ರವರು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ಶ್ರೀ ಪ್ರೇಮನಾಥ ಹಾಗೂ ರೋವರ್ಸ್ ಸ್ಕೌಟ್ ಲೀಡರ್ ಶ್ರೀ ಪ್ರಕಾಶ್ ಹಾಗೂ ಮಾನವ ಹಕ್ಕುಗಳು ಮತ್ತು ಕಾನೂನು ಅರಿವು ಜಾಗೃತಿ ಘಟಕದ ಸಂಯೋಜಕಿ ಶ್ರೀಮತಿ ದಿವ್ಯಶ್ರೀ ಉಪಸ್ಥಿತರಿದ್ದರು. ಮಾಸ್ಟರ್ ಪವನ್ ದ್ವಿತೀಯ ಬಿ. ಎ ಸ್ವಾಗತಿಸಿದರು, ಕುಮಾರಿ ಹರ್ಷಿತ ದ್ವಿತೀಯ ಬಿ. ಕಾಂ. ವಂದಿಸಿದರು. ಕುಮಾರಿ ಮನ್ವಿತಾ ದ್ವಿತೀಯ ಬಿ. ಸಿ. ಎ ನಿರೂಪಿಸಿದರು.