ಕುಂದಾಪುರ(ಜು 01): ಅಂತಾರಾಷ್ಟ್ರೀಯ ವೈದ್ಯರ ದಿನಾಚರಣೆಯ ಪ್ರಯುಕ್ತ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್
ಅಮಾಸೆಬೈಲು ಪರಿಸರದಲ್ಲಿ ತೇಜಸ್ವಿನಿ ಕ್ಲಿನಿಕ್ ಮೂಲಕ ರಸ್ತೆ, ವಾಹನ, ಪೋನ್ ಸೌಲಭ್ಯಗಳಿಲ್ಲದ ಕಾಲದಲ್ಲಿ ರಾತ್ರಿ-ಹಗಲು ಎನ್ನದೆ ಸಾವಿರಾರು ಬಾಣಂತಿಯರ, ಮಕ್ಕಳ, ರೋಗಿಗಳ ಪ್ರಾಣ ಉಳಿಸಿ ಇಂದಿಗೂ ಅದೇ ಪರಿಸರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರಾದ ಡಾ. ಮಂದಾರ ಶೆಟ್ಟಿಯವರನ್ನು ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಮಂದಾರ ಶೆಟ್ಟಿಯವರು ಕಷ್ಟವಾದರೂ ಹಾಗೂ ನಗರದಲ್ಲಿ ಸೇವೆಮಾಡುವ ಅವಕಾಶವಿದ್ದರೂ ಸೇವೆಮಾಡುವ ಉದ್ದೇಶದಿಂದಲೇ ಇಷ್ಟು ಧೀರ್ಘಾವಧಿಯವರಿಗೆ ಪ್ರಾಮಾಣಿಕ ಕರ್ತವ್ಯ ಮಾಡುತ್ತಿದ್ದೇನೆ .ಜನರಿಗಾದ ಉಪಯೋಗದಿಂದ ಸಾರ್ಥಕತೆ ಪಡೆಯುತ್ತಿದ್ದೇನೆ ಎಂದರು.
ಕ್ಲಬ್ ನ ಅಧ್ಯಕ್ಷರಾದ ಲ. ಉದಯಕುಮಾರ್ ಶೆಟ್ಟಿ ಮಚ್ಚಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿಕಟ ಪೂರ್ವ ಅಧ್ಯಕ್ಷರಾದ ಲ. ವಸಂತರಾಜ ಶೆಟ್ಟಿ ಅತಿಥಿಗಳನ್ನು ಸಭೆಗೆ ಪರಿಚಯಿಸಿ ವೈದ್ಯರ ದಿನಾಚರಣೆ ಪ್ರಸ್ತುತತೆ ಬಗ್ಗೆ ಮಾತನಾಡಿದರು. ಲಯನ್ಸ್ ಕ್ಲಬ್ ನ ಉಡುಪಿ ಜಿಲ್ಲಾ ರಾಯಬಾರಿ ಲ. ಅರುಣ್ ಕುಮಾರ್ ಹೆಗ್ಡೆ, ವಡೇರ್ ಹೋಬಳಿ ಲಯನ್ ಕ್ಲಬ್ ನ ನೂತನ ಅಧ್ಯಕ್ಷರಾಗಿರುವ ಲ.ಟಿ.ಎನ್.ರಘುರಾಮ ಶೆಟ್ಟಿ, ಕಾವ್ರಾಡಿ ಗ್ರಾ.ಪಂ. ಸದಸ್ಯರಾಗಿರುವ ಶ್ರೀ ಪ್ರಕಾಶ್ಚಂದ್ರ ಶೆಟ್ಟಿ , ಕೋಸ್ಟಲ್ ಕ್ಲಬ್ ನ ಸ್ಥಾಪಕಾಧ್ಯಕ್ಷರಾದ ಲ. ಅಶೋಕ್ ಕುಮಾರ್ ಶೆಟ್ಟಿ ಸಂಸಾಡಿ, ಹಾಗೂ ಲಯನ್ಸ್ ಕ್ಲಬ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಲ.ವೆಂಕಟರಮಣ ನಾಯಕ್ ವಂದಿಸಿದರು.