ಕುಂದಾಪುರ ಹಾಗೂ ಬೈಂದೂರು ಕ್ಷೇತ್ರದ ಸಾರಿಗೆ ಸಮಸ್ಯೆಗಳ ಕುರಿತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈಗಾಗಲೇ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇಷ್ಟೇಲ್ಲಾ ಸಮಸ್ಯೆಗಳಿದ್ದರೂ ಅಧಿಕಾರಿಗಳು, ಮೀನಾಮಿಷ ಎನ್ನುತಿದ್ದು,ಸತತ ಮೂರು ವರ್ಷಗಳಿಂದ ಎಲ್ಲಾ ಗ್ರಾಮಗಳಿಗೂ ಸಾರಿಗೆ ಕಲ್ಪಿಸುವ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ.
ಸಾರಿಗೆ ಇಲಾಖೆಯ ಅಧಿಕಾರಿಗಳಲ್ಲಿ ಕೇಳಿದರೆ ಆರ್. ಟಿ.ಓ ಅಧಿಕಾರಿಗಳು ಪರವಾನಗಿ ನೀಡುತ್ತಿಲ್ಲ ಎಂದು ಹೇಳುತ್ತಾರೆ. ಆರ್. ಟಿ.ಓ ಅಧಿಕಾರಿಗಳಲ್ಲಿ ಕೇಳಿದರೆ ಸಾರಿಗೆ ಇಲಾಖೆಯ ಅಧಿಕಾರಿಗಳು ಪರವಾನಗಿ ಮಾಡಿಸಲು ಮನವಿ ಪತ್ರ ನೀಡಿಲ್ಲ ಎಂದು ಹೇಳುತ್ತಾರೆ. ಹೀಗೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ನಮ್ಮ ನಮ್ಮ ಊರಿಗೆ ಸರ್ಕಾರಿ ಬಸ್ಸು ಸಂಚರಿಸುತ್ತಿಲ್ಲಾ ಎನ್ನುವುದು ಜನರ ಗೋಳು.
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಆರ್. ಟಿ.ಓ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಸ್ಥಳದಲ್ಲೇ ಪರವಾನಗಿ ಮಾಡಿಸಿ ಕೊಡುವಂತೆ ಮನವಿ ಸಲ್ಲಿಸಿ ನಂತರ ಸ್ಥಳದಲ್ಲೇ ಪರವಾನಗಿ ಮಾಡಿಸಿ ಕೊಡಬೇಕು. ಇದು ಬೈಂದೂರು ಹಾಗೂ ಕುಂದಾಪುರ ಕ್ಷೇತ್ರದ ಜನಪ್ರತಿನಿಧಿಗಳಲ್ಲಿ ವಿದ್ಯಾರ್ಥಿಗಳ ಮನವಿ. ಇಲ್ಲದಿದ್ದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮತೊಮ್ಮೆ ಬ್ರಹತ್ ಪ್ರತಿಭಟನೆಗೆ ಸಿದ್ದರಾಗಬೇಕಾಗುತ್ತದೆ ಎನ್ನುತ್ತಿದೆ ವಿದ್ಯಾರ್ಥಿ ಸಮುದಾಯ.
ವಿದ್ಯಾರ್ಥಿಗಳ ಸಮಯಕ್ಕೆ ಬಸ್ ಚಲಾಯಿಸುವುದರ ಮೂಲಕ ಸಾರ್ವಜನಿಕರಿಗೂ ಅನುಕೂಲವಾಗುವಂತೆ ಬಸ್ ಚಲಾಯಿಸಬೇಕು. ಏಕೆಂದರೆ ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಕೊಂಡಿರುತ್ತಾರೆ ಹಾಗೂ ಸಾರ್ವಜನಿಕರು ಟಿಕೆಟ್ ಪಡೆಯುತ್ತಾರೆ ಹಾಗಾಗಿ ಇಲಾಖೆಗೆ ಆದಾಯ ಕಡಿಮೆ ಆಗುವುದಿಲ್ಲ ಹಾಗಾಗಿ ಸಾರಿಗೆ ಬಸ್ಸು ನಿರಂತರ ಸಂಚರಿಸುತ್ತಿರುತ್ತದೆ. ಇಲ್ಲದಿದ್ದರೆ ರೆವೆನ್ಯೂವ್ ಕಡಿಮೆಯಾದಲ್ಲಿ ಬಸ್ ನಿಲ್ಲಿಸುತ್ತಾರೆ.
ಹಾಗಾಗಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪರವಾನಗಿ ಸಮಯವನ್ನು ತಮ್ಮ ತಮ್ಮ ಗ್ರಾಮದವರೇ ಸಮಯವನ್ನು ಮಾಡಿಸಿಕೊಂಡು ಆರ್. ಟಿ.ಓ ಅಧಿಕಾರಿಗಳಿಗೆ ಮನವಿ ಕೊಟ್ಟು ಇದೇ ಸಮಯಕ್ಕೆ ಪರವಾನಗಿ ಮಾಡಿಸಿ ಕೊಡುವಂತೆ ಕೇಳಿಕೊಳ್ಳಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೀಡಿದ ಭರವಾಸೆಗಳು ಆದಷ್ಟು ಬೇಗ ಈಡೇರಲ್ಲಿ ಎನ್ನುವುದು ನಮ್ಮ ಆಶಯ.