ಬ್ರಹ್ಮಾವರ (ಮೇ02): ಇಲ್ಲಿನ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಯಲ್ಲಿ “ಸಾಂಪ್ರದಾಯಿಕ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು. ಸದಾಕಾಲ ಶಿಸ್ತಿನಿಂದ ಸಮವಸ್ತ್ರವನ್ನು ಧರಿಸುತ್ತಿದ್ದ ವಿದ್ಯಾರ್ಥಿಗಳು ಸಾಂಪ್ರದಾಯಿಕ ದಿನದಂದು ವಿವಿಧ ಬಗೆಯ ಉಡುಗೆಗಳಿಂದ ಕಂಗೊಳಿಸಿದರು.
ವಿದ್ಯಾರ್ಥಿನಿಯರು ಸೀರೆ, ಲಂಗ ದಾವಣಿ ತೊಟ್ಟಿದ್ದರೆ ವಿದ್ಯಾರ್ಥಿಗಳು ಬಿಳಿ ಪಂಚೆ, ಶರ್ಟು ,ಕುರ್ತಾ ಹೆಗಲ ಮೇಲೊಂದು ಶಾಲು ಧರಿಸಿ ಸಂಭ್ರಮದಿಂದ ಓಡಾಡುತ್ತಾ ಗಮನ ಸೆಳೆದರು . ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ತರಗತಿಯನ್ನು ವಿವಿಧ ಆಚರಣೆಯನ್ನು ಪ್ರತಿನಿಧಿಸುವ ರೀತಿಯಲ್ಲಿ ಸಂಭ್ರಮದಿಂದ ಅಲಂಕರಿಸಿ ಹಾಗೂ ಪ್ರಾಚ್ಯ ವಸ್ತುಗಳ ಪ್ರದರ್ಶನವನ್ನು ನೀಡಿ, ಹಬ್ಬದ ವಾತಾವರಣವನ್ನು ನಿರ್ಮಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಇದರ ಕನ್ನಡ ವಿಭಾಗ ಮುಖ್ಯಸ್ಥರಾದ ಶ್ರೀ ಉದಯ ನಾಯ್ಕ ಆಗಮಿಸಿ ಇವರು ವಿದ್ಯಾರ್ಥಿಗಳಿಗೆ ಜೀವನ ಮೌಲ್ಯದ ಕುರಿತಾಗಿ ಮಾಹಿತಿ ನೀಡಿದರು. ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣಸಂಸ್ಥೆಯ ಸಂಸ್ಥಾಪಕರಾದ ಶ್ರೀ ಸುಬ್ರಮಣ್ಯ ರವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಸಂಸ್ಕೃತಿ ಉಳಿಸಿ ಬೆಳೆಸುವ ಕುರಿತಾಗಿ ಮಾಹಿತಿ ನೀಡಿದರು.
ಜೊತೆಗೆ ಸಂಸ್ಥೆಯ ನಿರ್ದೇಶಕಿಯಾದ ಶ್ರೀಮತಿ ಮಮತಾ, ಉಪಪ್ರಾಂಶುಪಾಲರಾದ ಶ್ರೀಮತಿ ಸುಜಾತಾ, ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಶ್ರೀಮತಿ ರಝಿಕಾ ಉಪಸ್ಥಿತರಿದ್ದರು .ಕನ್ನಡ ವಿಭಾಗದ ಉಪನ್ಯಾಸಕಿ ಅನುಪಮಾ ಭಟ್ ಸಾಂಪ್ರದಾಯಿಕ ದಿನದ ಮಹತ್ವದ ಕುರಿತಾಗಿ ಮಾತನಾಡಿದರು. ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು ವ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸನ್ನಿಧಿ ಜೋಗಿ ಸ್ವಾಗತಿಸಿ, ಪ್ರಿಯಾಂಕ ಶೆಟ್ಟಿ ವಂದಿಸಿ ,ವಾಣಿಜ್ಯ ವಿಭಾಗದ ಉಪನ್ಯಾಸಕಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.