ಹೆಮ್ಮಾಡಿ(ಆ,21): ದಿವಂಗತ ಶೀನ ಮೊಗವೀರ ಬಾಳಿಕೆರೆ ಅರ್ಸುಮಕ್ಕಿ ಇವರ ಕುಟುಂಬಕ್ಕೆ ಇಂದು ದಾನಿಗಳ ನೆರವಿನಿಂದ ಸಂಗ್ರಹವಾದ ಹಣವನ್ನು ಮೊಗವೀರ ಯುವ ಸಂಘಟನೆ(ರಿ.),ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕದ ಅಧ್ಯಕ್ಷರಾದ ದಿನೇಶ್ ಬಿ ಕಾಂಚನ ರವರ ನೇತ್ರತ್ವದಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಬಾಳಿಕೆರೆ ಮೊಗವೀರ ಗ್ರಾಮ ಸಭಾ ಕುಡಿಗೆಯ ಅಧ್ಯಕ್ಷರಾದ ಸುಧಾಕರ್ ಕಾಂಚನ್ , ಕೂಡಿಗೆಯ ಗೌರವ ಸಲಹೆಗಾರರಾದ ಗಣೇಶ ಟಿ. ಕಾಂಚನ್ , ಹೆಮ್ಮಾಡಿ ಘಟಕ ಮಾಜಿ ಅಧ್ಯಕ್ಷರಾದ ಲೋಹಿತಾಶ್ವ ಆರ್ ಕುಂದರ್ ಬಾಳಿಕೆರೆ, ಗ್ರಾಮ ಸಭಾ ಕೂಡಿಗೆಯ ಕೋಶಾಧಿಕಾರಿ ಜಯಂತ್ ಕುಂದರ್ ಹಾಗೂ ರಾಜು ದುರ್ಗಾನರು ಉಪಸ್ಥಿತರಿದ್ದರು.
ದಿ.ಶೀನ ಮೊಗವೀರ ರ ಮನೆಗೆ ಹೋಗಿ ಅವರ ಪತ್ನಿ ಮರ್ಲಿ ಮತ್ತು ಮಕ್ಕಳ ಸಮ್ಮುಖದಲ್ಲಿ ಸುಮಾರು ರೂ. 59000 ಸಂಗ್ರಹವಾಗಿದ್ದು ಅದರಲ್ಲಿ 5000/ ಅವರ ಮಗಳ ಅಂತ್ಯ ಸಂಸ್ಕಾರಕ್ಕೆ ಖರ್ಚಾಗಿದ್ದು . ಉಳಿದ ರೂ .54000 ಹಣವನ್ನು ಹಸ್ತಾಂತರಿಸಲಾಯಿತು.
ಈ ಮಾನವೀಯ ನೆಲೆಯ ಸಹಾಯಕ್ಕೆ ಕೈಜೋಡಿಸಿರುವ ಬಾಳಿಕೆರೆ ಗ್ರಾಮಸ್ಥರಿಗೂ,ಹಾಗೂ ಮಣಿಪಾಲ ಆಸ್ಪತ್ರೆಯಿಂದ ಮೃತ ದೇಹವನ್ನು ಮನೆಗೆ ತರುವಲ್ಲಿ ಸಹಕಾರ ಮಾಡಿರುವ ಗ್ರಾಮ ಪಂಚಾಯತ್ ಸದಸ್ಯರು ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ,ಮುಂಬೈ, ಬೆಂಗಳೂರಿನಲ್ಲಿ ನೆಲೆಸಿರುವ ಊರಿನ ಬಂಧುಗಳಿಗೂ, ಧನ ಸಹಾಯ ಮಾಡಿರುವ ಪರ ಊರಿನ ದಾನಿಗಳಿಗೂ, ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿಯವರಿಗೂ ತುಂಬು ಹೃದಯದ ಧನ್ಯವಾದವನ್ನು ಈ ಸಂದರ್ಭದಲ್ಲಿ ಸಲ್ಲಿಸಲಾಯಿತು.
.