ಕುಂದಾಪುರ:(ಡಿ,19) : ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಕುಂದಾಪುರದಲ್ಲಿ “ಎಚ್ಇಐಗಳಲ್ಲಿ ಗುಣಮಟ್ಟದ ಸಂಸ್ಕೃತಿಯನ್ನು ಉತ್ತೇಜಿಸುವುದು, ನ್ಯಾಕ್ ಮಾನ್ಯತೆ ಮತ್ತು ಒಳನೋಟಗಳು” ಎಂಬ ವಿಷಯದ ಮೇಲೆ ಶಿಕ್ಷಕ ಅಭಿವೃದ್ಧಿ ಕಾರ್ಯಕ್ರಮ (ಎಫ್ಡಿಪಿ) ಡಿಸೆಂಬರ್ ,19 ರಂದು ನಡೆಯಿತು.
ಸಹಾಯಕ ಪ್ರಾಧ್ಯಾಪಕ ಮತ್ತು ಮಾಜಿ ಐಕ್ಯೂಎಸಿ ಸಂಚಾಲಕರಾದ ಶ್ರೀ. ಹಾರ್ದಿಕ್ ಪಿ. ಚೌಹಾಣ್, ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ನ್ಯಾಕ್ ಅಕ್ರೆಡಿಟೇಶನ್ ಪ್ರಕ್ರಿಯೆ ಮತ್ತು ಎಚ್ಇಐಗಳಲ್ಲಿ ಗುಣಮಟ್ಟವನ್ನು ಕಾಪಾಡುವ ಉತ್ತಮ ಮಾರ್ಗಗಳ ಬಗ್ಗೆ ವಿವರಿಸಿದರು. ನ್ಯಾಕ್ ನ ಹಿಂದಿನ ಮಾನದಂಡ ಮತ್ತು ಈಗಿನ ಮಾನದಂಡದಲ್ಲಿನ ಬದಲಾವಣೆಯ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಗುಣಮಟ್ಟ ಹೆಚ್ಚಿಸಲು ನೆರವಾಗುವ ಅತ್ಯುತ್ತಮ ವಿಧಾನಗಳು, ಉತ್ತಮ ಕಾರ್ಯಪದ್ಧತಿಗಳು ಮತ್ತು ನಿರಂತರ ಸುಧಾರಣೆಯ ತಂತ್ರಗಳ ಮೇಲೆ ಆಳವಾದ ಚರ್ಚೆಗಳು ನಡೆಯಿತು.
ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ.ಎಂ. ಅಬ್ದುಲ್ ರಹಮಾನ್ ಬ್ಯಾರಿ, ಪ್ರಾಂಶುಪಾಲೆಯವರಾದ ಪ್ರೊ. ಶಬೀನಾ ಹೆಚ್, ಐಕ್ಯೂಎಸಿ ಸಂಚಾಲಕರಾದ ಪ್ರೊ. ನೂತನ್, ಹಾಗೂ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊ. ಅಹಮ್ಮದ್ ಖಲೀಲ್ ನಿರೂಪಿಸಿದರು.